ಯಲಬುರ್ಗಾ: ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಆರ್.ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ಸದಸ್ಯತ್ವ ನೋಂದಣಿ ಹಾಗೂ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಗಾಣಿಗ ಸಮಾಜವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟಿಸಲು ಒತ್ತು ನೀಡಲಾಗುವುದು. ಸೆ.8ರಂದು ಬೇವೂರು ಗ್ರಾಮದಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಎಲ್ಲರೂ ಬೆಂಬಲ ನೀಡಲಿ ಎಂದರು.
ವಕೀಲ ಹನುಮಂತರಾಯ ಕೆಂಪಳ್ಳಿ ಮಾತನಾಡಿ, ಸಂಘಟನೆಗೆ ಒತ್ತು ನೀಡುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಸ್ಯೆಯಿಂದ ಪರಿಹರಿಸುವ ಕೆಲಸವಾಗಲಿ. ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟನೆಯಾಗಬೇಕು. ಗಾಣಿಗರ ಸೌಹಾರ್ದ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಬೇಕು. ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಪ್ರಮುಖರಾದ ಅಮೃತಪ್ಪ ದೇಸಾಯಿ, ರಾಚಪ್ಪ ಹುರಳಿ, ಬುಡ್ಡಪ್ಪ ಹಳ್ಳಿ, ಅಯ್ಯನಗೌಡ ಕೆಂಚಮ್ಮನವರ್, ಯು.ಎಸ್.ಮೆಣಸಗೇರಿ, ಜಯರಾಜ ದೇಸಾಯಿ, ತೋಟಪ್ಪ ಗುಂಗಾಡಿ, ನಾಗನಗೌಡ ಜಾಲಿಹಾಳ, ಗುಂಗಾಡಿ ಶರಣಪ್ಪ, ಶಿವಸಂಗಪ್ಪ ಹುಚನೂರ, ಇತರರಿದ್ದರು.