ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠ ಸ್ವಾಮೀಜಿಗಳ 23ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು, ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಡಾ.ಮಹಾದೇವ ದೇವರು, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪ ತಹಸೀಲ್ದಾರ್ ವಿರುಪಣ್ಣ ಹೊರಪೇಟಿ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಎಂ.ಪಿ.ಮಲ್ಲಯ್ಯ ಇತರರಿದ್ದರು. 
ಜಿಲ್ಲೆ

ಮಠಗಳಿಂದ ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ

ಯಲಬುರ್ಗಾ: ಮಠಗಳು ಸದಾ ಭಕ್ತರ ಏಳಿಗೆಗಾಗಿ ಶ್ರಮಿಸುತ್ತವೆ ಎಂದು ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳ 23ನೇ ಪೀಠಾರೋಹಣದ ವಾರ್ಷಿಕ ಅಂಗವಾಗಿ ಹಮ್ಮಿಕೊಂಡಿದ್ದ ರುದ್ರಾಭಿಷೇಕ, ಶಿವದೀಕ್ಷಾ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠಗಳು ಭಕ್ತರ ಕಷ್ಟ-ಸುಖಗಳಿಗೆ ಸ್ಪಂದಿಸಿದಾಗ ಧಾರ್ಮಿಕತೆ ಬೆಳೆಯುತ್ತದೆ. ಇಲ್ಲಿಯ ಶ್ರೀಮಠವು ಬಹಳ ಭಕ್ತಗಣ ಹೊಂದಿದೆ ಎಂದರು.

ಜಿಗೇರಿಯ ಗುರುಸಿದ್ಧೇಶ್ವರ ಹಿರೇಮಠ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀಗಳು ಮಠವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ ಪ್ರತಿವರ್ಷ 7 ದಿನಗಳ ಕಾಲ ನಿರಂತರವಾಗಿ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಭಕ್ತರ ಸಹಕಾರದಿಂದ ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಸ್ವಾಮೀಜಿಗಳ ಸಾಮಾಜಿಕ ಕಾರ್ಯಕ್ಕೆ ಕೊನೆಯೇ ಇಲ್ಲ ಎಂದು ಬಣ್ಣಿಸಿದರು. ಜಗದೀಶ್ವರ ಹಿರೇಮಠ ಮಸೂತಿ ಪೂಜ್ಯರು ಮಾತನಾಡಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಡೊಳ್ಳು ಕುಣಿತ, ಕುಂಭ ಕಳಸದೊಂದಿಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಅನ್ನದಾನೇಶ್ವರ ಶಾಖಾ ಮಠ ಕುಕನೂರಿನ ಡಾ. ಮಹಾದೇವ ದೇವರು, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪ ತಹಸೀಲ್ದಾರ್ ವಿರುಪಣ್ಣ ಹೊರಪೇಟಿ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಎಂ.ಪಿ.ಮಲ್ಲಯ್ಯ, ಪ್ರಮುಖರಾದ ಡಾ.ಪ್ರಕಾಶ ಚೂರಿ, ಡಾ.ಸಂಜಯ್ ಚಿತ್ರಗಾರ, ಹಿರಿಯರಾದ ಚನ್ನಪ್ಪಗೌಡ್ರ ಮಾಲಿಪಾಟೀಲ, ಶರಣಯ್ಯ ಇಟಗಿ, ಕಳಕನಗೌಡ ಕಲ್ಲೂರ ಇತರರಿದ್ದರು.