ಮೈಸೂರು: ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮ ದಿನಾಚರಣೆ ಪ್ರಯುಕ್ತ ಲಯನ್ಸ್ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಈ ಸಂದರ್ಭ ಯುವ ಮೋರ್ಚಾ ನಗರಾಧ್ಯಕ ಆರ್.ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಲೋಹಿತ್, ಆರ್. ಸಚಿನ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಲಯನ್ಸ್ ಜೀವದಾರರ ಕೇಂದ್ರದ ವ್ಯವಸ್ಥಾಪಕ ಗಿರೀಶ್, ಪ್ರಮುಖರಾದ ಗುರೂರು ಚೇತನ್, ಪುನೀತ್ ಕುಮಾರ್, ಸಂತೋಷ್, ಎಂ.ರವಿ, ಅರ್ಜುನ್, ಮೋಹನ್, ಮನೋಜ್, ಹೂಟಗಳ್ಳಿ ನಾಗರಾಜು, ನಾಗಮಣಿ, ಕುಮಾರಸ್ವಾಮಿ, ಮಹದೇವಸ್ವಾಮಿ, ಮಂಜೇಶ್ ಹಾಗೂ ಇತರರು ಇದ್ದರು.