ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಕ್ರಮ ವಿರೋಧಿಸಿ ಪಟ್ಟಣದಲ್ಲಿ ಗುರುವಾರ ಅವರ ಅಭಿಮಾನಿಗಳು, ವಿವಿಧ ಹಿಂದುಪರ ಸಂಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಹೇಶ ಕುಂಬಾರ, ಶರಣಗೌಡ ಬಂಡಿ, ರವಿಗೌಡ ಪಾಟೀಲ, ನಾಗರಾಜ ದಶವಂತ, ಶ್ರೀಧರ ತ್ರಿ, ವಿನೋದ ಹದಗಲ್ಲ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಿಂದುತ್ವದ ಚಂಡು, ಅವರನ್ನು ಪದಿಂದ ಉಚ್ಚಾಟಿಸಿದ್ದು ಸರಿಯಾದ ಕ್ರಮವಲ್ಲ, ಕೂಡಲೇ ಅವರನ್ನು ಪಕ್ಷಕ್ಕೆ ಮರಳಿ ಸೇರ್ಪಡೆಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ 10 ಸೀಟ್ ಸಹ ಬಿಜೆಪಿ ಗೆಲ್ಲಲು ಸಾಧವಾಗಲ್ಲ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕುತಂತ್ರದಿಂದ ಈ ಉಚ್ಚಾಟನೆಯಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಯ ಪಾಟೀಲ, ಆನಂದ ದೇವರ, ರತನ ಹಲವಾಯಿ, ನಾಗರಾಜ ದಶವಂತ, ಅಂಬಣ್ಣ ಕವಟಗಿ, ಶಿವು ತಾಂಬೆ, ಚಂದ್ರಶೇಖರ ದೇವರ, ಶಾಂತೇಶ ಕತ್ರಿ, ಶಾಂತು ಪಾಸೋಡಿ, ಹರೀಶ ಆಳಂದಿಕರ ಇತರರಿದ್ದರು.