ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಬೆಳಗಾವಿಯ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕೋಡಿಯಲ್ಲಿ ಈಚೆಗೆ ವಿವಾಹವಾದ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಜಗದೀಶ ಕವಟಗಿಮಠ ಅವರ ಪುತ್ರಿ ಡಾ. ಗೌರಿ ಕವಟಗಿಮಠ ಹಾಗೂ ಡಾ.ಹರ್ಷೆಂದ್ರ ಅವರಿಗೆ ಆಶೀರ್ವದಿಸಿ ಶುಭ ಹಾರೈಸಿದರು. ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ, ಬಸವರಾಜ ಮೆಟಗುಡ್ಡಮಠ, ಮಧು ಹಿರೇಮಠ, ಗೀತಾ ಹಿರೇಮಠ, ರಾಜೇಶ್ವರಿ ಮಹಾಂತೇಶ ಕವಟಗಿಮಠ, ವೀಣಾ ಜಗದೀಶ ಕವಟಗಿಮಠ ಮತ್ತು ಕುಟುಂಬ ಸದಸ್ಯರು ಇದ್ದರು.