ಸಂಡೂರು ಸರ್ಕಾರಿ ಆಸ್ಪತ್ರೆಗೆ ಜೆಎಸ್‌ಡಬ್ಲು ೃ ಫೌಂಡೇಶನ್‌ನಿಂದ 2 ಡಯಾಲಿಸಿಸ್ ಯಂತ್ರಗಳಿಗೆ ಶಾಸಕಿ ಅನ್ನಪೂರ್ಣಾ ತುಕಾರಾಮ್ ಚಾಲನೆ ನೀಡಿದರು. ಸಂಸದ ಈ.ತುಕಾರಾಮ್, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ತಾಲೂಕು ವೈದ್ಯಾಧಿಕಾರಿ ಭರತ್ ಕುಮಾರ್ ಇತರರಿದ್ದರು. 
ಜಿಲ್ಲೆ

ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ

ಸಂಡೂರು: ಜೆಎಸ್‌ಡಬ್ಲು ೃ ಫೌಂಡೇಷನ್ ಗ್ರಾಮೀಣ ಆರೋಗ್ಯ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 2 ಡಯಾಲಿಸಿಸ್ ಯಂತ್ರಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಅಳವಡಿಸಿ ಚಿಕಿತ್ಸೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಸಂಸದ ಈ.ತುಕಾರಾಮ್ ಮಾತನಾಡಿ, ಜೆಎಸ್‌ಡಬ್ಲು ೃ ಸಂಸ್ಥೆ ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಿದ್ದು ಶ್ಲಾಘನೀಯ. ರೋಗಿಗಳಿಗೆ ಚಿಕಿತ್ಸಾ ವೆಚ್ಚ, ಪ್ರಯಾಣದ ವೆಚ್ಚ ಹಾಗೂ ಸಮಯ ಉಳಿತಾಯವಾಗಲಿದೆ. ಯಂತ್ರಗಳ ನಿರ್ವಹಣೆ ಆಸ್ಪತ್ರೆಯಿಂದ ಮಾಡಲಾಗುವುದು ಎಂದರು. ಜೆಎಸ್‌ಡಬ್ಲು ೃ ಫೌಂಡೇಷನ್ ದಕ್ಷಿಣ ಭಾರತದ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಡಯಾಲಿಸಿಸ್ ಯಂತ್ರಗಳಿಂದ ವರ್ಷದಲ್ಲಿ 1000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಬಹುದು, ಹೆಚ್ಚುತ್ತಿರುವ ಡಯಾಲಿಸಿಸ್ ಆರೈಕೆ ಸೇವೆಗೆ ಅನುಕೂಲವಾಗಲಿದೆ ಎಂದರು.

ಶಾಸಕಿ ಅನ್ನಪೂರ್ಣಾ ತುಕಾರಾಮ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಉದ್ಯೋಗಖಾತ್ರಿ ಎಡಿ ರೇಣುಕಾಚಾರ್ಯ ಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಭರತ್ ಕುಮಾರ್, ಉಪಾಧ್ಯಕ್ಷೆ ಎಂ.ಸಿ.ಲತಾ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಪ್ರಮುಖರಾದ ಶೈಲಜಾ ನಿಕ್ಕಂ ಇತರರಿದ್ದರು.