ರೇವತಗಾಂವ ಸಮೀಪದ ಶಿರಾಡೋಣ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ಗಣ್ಯರು, ಶ್ರೀಗಳು ಚಾಲನೆ ನೀಡಿದರು. ಸಿದ್ಧರಾಮಾನಂದ ಶ್ರೀಗಳು, ಎಂಎಲ್‌ಸಿ ಎಚ್.ವಿಶ್ವನಾಥ, ಶಾಸಕ ವಿಠ್ಠಲ ಕಟಕದೊಂಡ, ರಾಜೇಶ್ವರಿ ಯರನಾಳ ಇತರರಿದ್ದರು. 
ಜಿಲ್ಲೆ

ಶಿರಾಡೋಣದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಸಿಎಂ, ಸಚಿವರು ಸಹಕರಿಸಲಿ

ರೇವತಗಾಂವ: ಶಿರಾಡೋಣ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ ಶೀಘ್ರ ಪ್ರಾರಂಭಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರು ಸಹಕರಿಸಬೇಕು ಎಂದು ಕಾಗಿನೆಲೆ ಶ್ರೀ ಕನಕ ಗುರು ಪೀಠದ ತಿಂಥಿಣಿ ಬ್ರಿಜ್ ಶಾಖಾಮಠದ ಪೀಠಾಧಿಪತಿ ಸಿದ್ಧರಾಮಾನಂದ ಶ್ರೀಗಳು ಹೇಳಿದರು.

ಶಿರಾಡೋಣ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಗುರುವಾರ ಹಮ್ಮಿಕೊಂಡಿದ್ದ ಅಡಿಗಲ್ಲು ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರು ಡೊಳ್ಳು ಬಾರಿಸುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಶಿರಾಡೋಣದ ಸೀಗಿಮಠ ದಕ್ಷಿಣ ಭಾರತದ ಕಾಶಿ ರೀತಿಯಲ್ಲಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ನಾನು ಕೂಡ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.

ಎಂ.ಆರ್.ಪಾಟೀಲ, ರಾಜೇಶ್ವರಿ ಯರನಾಳ ಜ್ಯೋತಿ ಬೆಳಗಿಸಿದರು. ಶೀಗಿಮಠ ಟ್ರಸ್ಟ್ ಗೌರವಾಧ್ಯಕ್ಷ ಶಾಸಕ ವಿಠ್ಠಲ ಕಟಕದೊಂಡ, ಗಿರಿಮಲ್ಲ ಬೆಳ್ಳುಂಡಗಿ, ಹನುಮಂತ ಬನಸೋಡೆ, ಸದಾಶಿವ ಜುಮಣ್ಣ, ರಾಜಕುಮಾರ ಕಂಬಾಗಿ, ಮೋಹನ ದಳವಾಯಿ, ವಿಶಾಲ ತಂಗ, ಕಾಶಿಬಾಯಿ ವಾಲಿಕಾರ, ಭಾರತಿ ಸಲಗರ, ಮಾಳಪ್ಪ ಪೂಜಾರಿ, ಜಕ್ಕಪ್ಪ ಕಲಾಟೆ, ಬೀರಪ್ಪ ಪೂಜಾರಿ, ಗಂಗೂಬಾಯಿ ಬಗಲಿ, ರಾಜಕುಮಾರ ಖರಾತ, ಹರಿದಾಸ ಪಾಟೀಲ, ಸಾಕ್ಷತ ಬಗಲಿ, ಬಂಗಾರೆವ್ವ ಬಗಲಿ, ರುದ್ರಪ್ಪ ಪೂಜಾರಿ ಇದ್ದರು. ರಾಮಚಂದ್ರ ಚೋಪಡೆ ನಿರೂಪಿಸಿದರು. ಭೀಮರಾಯ ಹಬಗೊಂಡೆ ಸ್ವಾಗತಿಸಿದರು. ರಾಯಗೊಂಡ ಪೂಜಾರಿ ವಂದಿಸಿದರು.