ಜಿಲ್ಲೆ

ನಾರ್ವೆಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಎ. ಆರ್. ರಘುರಾಮ

ಬೇಲೂರು : ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮವು ನಾರ್ವೆ ಗ್ರಾಮದ ಸಂತೇ ಮೈದಾನದಲ್ಲಿ ಕರ್ನಾಟಕ ಬ್ಯಾಂಕ್, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆಯಿತು.
ಕೇಂದ್ರ ಸರ್ಕಾರದಿಂದ ಬರುವ ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್, ಉಜ್ವಲಗ್ಯಾಸ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಟಿವಿ ಪರದೆಯ ಮೂಲಕ ಸಾರ್ವಜನಿಕರಿಗೆ ಅರಿವು ಮುಡಿಸಲಾಯಿತು. ಜತೆಗೆ ನಾಗರಿಕರಿಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಮಂಜುನಾಥ್, ಮಲ್ಲಿಕಾರ್ಜುನ ನಾರ್ವೆ, ಪವಿತ್ರಾ, ವೀಣಾ, ಕಾರ್ಯದರ್ಶಿ ಚಾಮರಾಜ್, ಕರ್ನಾಟಕ ಬ್ಯಾಂಕ್ ನಾರ್ವೆ ಶಾಖೆ ವ್ಯವಸ್ಥಾಪಕ ಪ್ರೀತಮ್, ಆರೋಗ್ಯ ಇಲಾಖೆಯ ಕಮಲಾ, ತಾಸೀನಾ ರಝಕ್, ಅರುಣ್, ಅಂಗನವಾಡಿ, ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಗ್ಯಾಸ್ ಏಜೆನ್ಸಿ ತಂಡ, ವಿವಿಧ ಇಲಾಖೆ ಸಿಬ್ಬಂದಿ ಮತ್ತು ಫಲಾನುಭವಿಗಳಿದ್ದರು.