ಕುಶಾಲನಗರ:
ಬದಲಾಗುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯನ ಜೀವನ ಶೈಲಿಯೂ ಬದಲಾಗುತ್ತಿದೆ. ಹಳ್ಳಿಗಳೂ ನಗರಗಳಾಗುತ್ತಿದ್ದು ಗ್ರಾಮೀಣ ಸಂಸ್ಕ್ರತಿ, ಆಚಾರ ವಿಚಾರಗಳು ಸಂಪ್ರದಾಯಗಳು ಕೂಡ ಬದಲಾಗುತ್ತಿರುವ ಹೊತ್ತಿನಲ್ಲಿ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಮೂಡಿ ಬಂದ ಸಾಂಪ್ರದಾಯಿಕ ಉಡುಪು ಧರಿಸುವ ಯತ್ನಿಕ್ ಡೇ ಕಾರ್ಯಕ್ರಮ ಗಮನ ಸೆಳೆಯಿತು.
ಕಾಲೇಜು ಪ್ರಾಂಶುಪಾಲರಾದ ಟಿ.ಎ. ಲಿಖಿತಾ ಪರಿಕಲ್ಪನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಅವರವರ ಸಂಪ್ರದಾಯ ಹಾಗೂ ಆಚಾರ ವಿಚಾರಗಳನ್ನು ಹೋಲುವ ಪಾರಂಪರಿಕ ಉಡುಪುಗಳನ್ನು ಧರಿಸಿ ಪ್ರದರ್ಶನ ನಡೆಸಿಕೊಟ್ಟರು. ವಿದ್ಯಾರ್ಥಿಗಳಂತೆ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ಕೂಡ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಹುಡುಗರು ಪಂಚೆ, ನೀಳ ಅಂಗಿ ಅದರ ಮೇಲೊಂದು ಟವೆಲ್ ಹಾಕಿ ಬಂದರೆ, ಹುಡುಗಿಯರು ಬಗೆ ಬಗೆಯ ಸೀರೆಗಳನ್ನು ಅಂದ ಚೆಂದವಾಗಿ ಉಟ್ಟು ಕಾರ್ಯಕ್ರಮಕ್ಕೆ ರಂಗು ತಂದರು.
ಈ ಸಂದರ್ಭ ಮಾತನಾಡಿದ ಕಾಲೇಜು ಪ್ರಾಂಶುಪಾಲೆ ಲಿಖಿತಾ, ವಿದ್ಯಾರ್ಥಿಗಳು ಎಷ್ಟೇ ಸಾಧಕರಾದರೂ ಕೂಡ, ಅದೆಷ್ಟೇ ವಿದ್ಯಾವಂತರು ಆದರೂ ಕೂಡ ನಮ್ಮ ಸಂಸ್ಕ್ರತಿ, ಸಂಸ್ಕಾರ ಹಾಗೂ ಆಚಾರ ವಿಚಾರಗಳನ್ನು ಮರೆಯಬಾರದು. ಪೂರ್ವಜರು ನಾಡಿನ ಪರಂಪರೆಗೆ ಧಕ್ಕೆ ಬರದಂತೆ ಎಚ್ಚರಿಕೆಯಿಂದ ಬದುಕು ಕಟ್ಟಿದ್ದರು.
ಆದರೆ, ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿರುವ ಇಂದಿನ ವಿದ್ಯಾರ್ಥಿಗಳು ಪೂರ್ವಜರು ಉಳಿಸಿ ಹೋದ ಸಂಸ್ಕ್ರತಿಯನ್ನು ಮರೆಯಬಾರದು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಇಂತಹ ಅಪರೂಪದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಾಗಿ ಹೇಳಿದರು.
ಕಾಲೇಜು ಆಡಳಿತ ಮಂಡಳಿಯ ಹಿರಿಯ ಟ್ರಸ್ಟಿ ಎನ್.ಎನ್. ಮೋಹನ್ ವಿದ್ಯಾರ್ಥಿಗಳು ಹಾಗೂ ಬೋಧಕರ ಉಡುಪುಗಳನ್ನು ನೋಡಿ ಶುಭ ಕೋರಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ, ಟ್ರಸ್ಟಿಗಳಾದ ಎನ್.ಎನ್.ಮೋಹನ್, ಎನ್.ಎನ್.ನಂಜಪ್ಪ, ಕೆ.ಎಸ್.ಮೂರ್ತಿ, ಕಾಲೇಜು ಅಧೀಕ್ಷಕ ಮಹೇಶ್ ಅಮೀನ್ ಇದ್ದರು.