ಜಿಲ್ಲೆ

ಯಶಸ್ವಿನಿ ಆರೋಗ್ಯರಕ್ಷಣಾ ಯೋಜನೆಯಡಿ ಸದಸ್ಯರನ್ನು ನೊಂದಾಯಿಸಲು ಆರಂಭ

ಬಾಬುರಾವ ಯಡ್ರಾಮಿ

ಯಾದಗಿರಿ : 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯರಕ್ಷಣಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಲ್ಲಿ ಸದಸ್ಯರನ್ನು ನೊಂದಾಯಿಸಲು ಆರಂಭವಾಗಿದೆ ಎಂದು ಯಾದಗಿರಿ ಸಹಕಾರ ಸಂಘಗಳ ಉಪನಿಬಂಧಕರು ಪವನಕುಮಾರ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘಗಳ, ಪಿಕಾರ್ಡ ಬ್ಯಾಂಕುಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳ, ಟಿ.ಎ.ಪಿ.ಸಿ.ಎಂ.ಎಸ್‌ಗಳ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ಅಥವಾ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರಡಿ ಅಥವಾ ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002ರಡಿ ನೊಂದಾಯಿಸಿ ಕಾರ್ಯನಿರ್ವಹಿಸುತ್ತಿರುವ ಯಾವುದೆ ಸಹಕಾರ ಸಂಘಗಳ ಸದಸ್ಯರು ಮತ್ತು ಗ್ರಾಮಿಣ ಸಹಕಾರ ಸಂಘಗಳ, ಜಿಲ್ಲಾಕೇಂದ್ರ ಸಹಕಾರ ಬ್ಯಾಂಕುಗಳ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸಂಗಟಿಸಲ್ಪಟ್ಟಿರುವ ಸ್ವ-ಸಹಾಯ ಗುಂಪುಗಳ ಸದಸ್ಯರುಗಳು ಗರಿಷ್ಟ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ.ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20%ರಷ್ಟು ಹೆಚ್ಚವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯಗೆ 100 ರೂ.ಗಳ ಪಾವತಿಸಿ ನೊಂದಾಯಿಸಬಹುದು. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಗಟಕಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರಕಾರವೆ ಭರಿಸುತ್ತದೆ.

ನಗರ ಸಹಕಾರಿಗಳ ಆರೋಗ್ಯರಕ್ಷಣಾಯೋಜನೆಯಡಿ ನೊಂದಾಯಿಸಲು ಯೋಜನೆಯಡಿಗರಿಷ್ಟ 4ಸದಸ್ಯರ ಕುಟುಂಬಕ್ಕೆ ವಾರ್ಷಿಕ ವಂತಿಗೆ 1000 ರೂ.ಗಳ ವಂತಿಗೆ ಮತ್ತು 4ಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ 20%ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 200 ರೂ.ಗಳ ಪಾವತಿಸಿ, ನೊಂದಾಯಿಸಬಹುದಾಗಿದೆ. ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಯಶಸ್ವಿನಿ ಯೋಜನೆಯಡಿ ನೊಂದಾಯಿಸುವ ದಿನಾಂಕಕ್ಕೆ | ತಿಂಗಳು ಕಳೆದಿರಬೇಕು. ಹಾಗೂ ವಯೋಮಿತಿ ನಿರ್ಬಂಧ ವಿರುವುದಿಲ್ಲ. ಈ ಯೋಜನೆಯಡಿ ಯಶಸ್ವಿನಿ ಸದಸ್ಯರುಗಳನ್ನು ನೊಂದಾಯಿಸುವ ನೊಂದಣಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಸರಿ ಸೂಮಾರು 1650 ಖಾಯಿಲೆಗಳಿಗೆ ಚಿಕಿತ್ಸೆಯನ್ನು ಯಶಸ್ವಿ ಯೋಜನೆಯಡಿ ಅಳವಡಿಸಿಕೊಂಡಿರುವದರಿAದ ಈ ಯೋಜನೆಯ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯಚಿಕಿತ್ಸಾ ವೆಚ್ಚದಗರಿಷ್ಟ ಮೀತಿ 5 ಲಕ್ಷ ರೂ.ಗಳ ನಿಗದಿಪಡಿಸಿದೆ. ರಾಜ್ಯದ ಯಾವುದೇ ಯಶಸ್ವಿನಿ ನೆಟ್‌ವರ್ಕ ಆಸ್ಪರ್ತೆಯಲ್ಲಿ ನಗದುರಹಿತಾ ಚಿಕಿತ್ಸಾ ಪಡೆಯಲು ಅವಕಾಶವಿರುತ್ತದೆ. ಪ್ರಯೋಜನೆಯು 2025ರ ಮಾರ್ಚ್ 31ರ ಒಳಗೆ ಯೋಜನೆಯ ನೊಂದಾಯಿಸಿಕೊAಡು ಪ್ರಯೋಜನೆ ಪಡೆದುಕೊಳ್ಳಬೇಕು. ಹಾಗೂ 2024-25ನೇ ಯಶಸ್ವಿನಿ ಯೋಜನೆಯ ಅವಧಿಯು 2025ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಕಛೇರಿಗಳನ್ನು ಖುದ್ದಾಗಿ ಭೇಟಿ ನೀಡಿ ಅಥವಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಯಾದಗಿರ ದೂ.ಸಂ. 08473 200424, ಯಾದಗಿರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ದೂ.ಸಂ. 08473 252379, 7899084467. ಹುಣಸಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಕಛೇರಿ ದೂ.ಸಂ. 9886549075. ಶಹಾಪೂರ ಸಹಕಾರ ವಿಸ್ತಿರ್ಣಾಧಿಕಾರಿ ಮೊ.ನಂ. 9972786111, ವಡಗೇರಾ ಸಹಕಾರ ವಿಸ್ತಿರ್ಣಾಧಿಕಾರಿ ಮೊ.ನಂ. 9901584772. ಯಾದಗಿರ ಸಹಕಾರ ವಿಸ್ತಿರ್ಣಾಧಿಕಾರಿ ಮೊ.ನಂ.9972246622. ಗುರುಮಠಕಲ್ ಸಹಕಾರ ವಿಸ್ತಿರ್ಣಾಧಿಕಾರಿ ಮೊ.ನಂ.9886014278ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.