ಜಿಲ್ಲೆ

ಬದುಕು ಕಟ್ಟೋಣ ತಂಡದಿಂದ ನೈಜ ಸೇವೆ : ಪ್ರತಾಪ್ ಸಿಂಹ ನಾಯಕ್ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬದುಕಿನಲ್ಲಿ ನಮ್ಮೊಂದಿಗೆ ಇದ್ದವರು ನೆನಪಾದರೆ, ಬದುಕು ಕಟ್ಟಲು ಸಹಾಯ ಮಾಡಿದವರು ಸ್ಮರಣೆಗೆ ಅರ್ಹರಾಗುತ್ತಾರೆ. ವಿಜಯರಾಘವ ಪಡ್ವೆಟ್ಣಾಯ ಮತ್ತು ಡಾ.ಬಿ.ಯಶೋವರ್ಮ ಅವರು ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಉಜಿರೆಯಲ್ಲಿ ಭಾನುವಾರ ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಯಶೋ ವಿಜಯ ಬದುಕು- ನೆನಪು- ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೋನಿಯಾ ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಿದರು. ನಾವೂರಿನ ವೈದ್ಯ ಡಾ.ಪ್ರದೀಪ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಧನಂಜಯ ರಾವ್ ಅಧ್ಯಕ್ಷತೆ ವಹಿಸಿದ್ದರು. ಒಂದರಿಂದ ಏಳನೇ ತರಗತಿವರೆಗಿನ ಸರ್ಕಾರಿ ಶಾಲೆಯ 600 ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 600ಕ್ಕಿಂತ ಅಧಿಕ ಅಂಕ ಗಳಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಕಲ್ಮಂಜ ಗ್ರಾಮದ ಬಿರ್ಮೆರಪಲಿಕೆ ಎಂಬಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿರ್ಮಿಸಿದ ‘ವಿಜಯ’ ಮನೆ ಹಸ್ತಾಂತರ, ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರು ಕರ್ನೋಡಿ ಶಾಲಾ ಗ್ರಂಥಾಲಯಕ್ಕೆ ನೀಡಿದ 350 ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ರಾವ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ ಶೆಟ್ಟಿ ಏಣಿಂಜೆ, ಎಸ್‌ಡಿಎಂ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ, ಎಸ್‌ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಕೆ., ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷ ಬಾಬು ರಾಜ್, ಬಿಇಒ ವೆಂಕಟೇಶ ತುಳುಪುಳೆ, ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಮಾಜಿ ಅಧ್ಯಕ್ಷ ಶ್ರೀಧರ ಕೆ.ವಿ. ಮತ್ತಿತರರಿದ್ದರು. ಆರ್‌ಜೆ ಪ್ರಸನ್ನ ನಿರೂಪಿಸಿದರು. ರೋಟರಿ ಕ್ಲಬ್ ಬೆಳ್ತಂಗಡಿ, ಎಸ್‌ಡಿಎಂ ಕಾಲೇಜಿನ ಎನ್ನೆಸ್ಸೆಸ್ ಘಟಕಗಳು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ವಲಯ ಗ್ಯಾರೇಜ್ ಮಾಲೀಕರ ಸಂಘ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಕಾರ್ಯಕ್ರಮದ ಸಹಭಾಗಿತ್ವ ವಹಿಸಿದ್ದವು.

ಯಶೋ ವಿಜಯ ಕಾರ್ಯಕ್ರಮ ಮೂಲಕ ಇಬ್ಬರು ಚಿರಸ್ಥಾಯಿಯಾಗಿದ್ದಾರೆ. ಸಜ್ಜನ ಪದಕ್ಕೆ ಪರ್ಯಾಯ ಪಡ್ವೆಟ್ನಾಯರು. ಸಂಸ್ಕಾರ, ಸಂಸ್ಕೃತಿಯೊಂದಿಗೆ ಜೀವನ ಮತ್ತು ಶಿಕ್ಷಣಕ್ಕೆ ಮಹತ್ವ ಕೊಟ್ಟವರು ಯಶೋವರ್ಮ. ಸೋನಿಯಾ ಯಶೋವರ್ಮ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ.ಹೆಗ್ಗಡೆಯವರ ಆಶೀರ್ವಾದ, ಡಿ.ಹರ್ಷೇಂದ್ರ ಕುಮಾರ್ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನ ಸಾಮಾಜಿಕ ಕೆಲಸಗಳು ಒಬ್ಬನ ಶಕ್ತಿಯಲ್ಲ. ಇದರ ಹಿಂದೆ ಅನೇಕ ಕೈಗಳ ಆಧಾರವಿದೆ. ಮೋಹನ್ ಕುಮಾರ್ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ