ಜಿಲ್ಲೆ

ಯಶ ಕಂಡ ರಾಷ್ಟ್ರಮಟ್ಟದ ವೆಬಿನಾರ್

Belagavi

ರಾಯಬಾಗ: ಸ್ಥಳೀಯ ಎಸ್.ಪಿ. ಮಂಡಳದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ರಾಜ್ಯಶಾಸ್ತ್ರ ವಿಭಾಗದಿಂದ ಬೌದ್ಧಿಕ ಆಸ್ತಿಯ ಹಕ್ಕು ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರಮಟ್ಟದ ವೆಬಿನಾರ್ ಜರುಗಿತು. ಸಂಪನ್ಮೂಲ ವ್ಯಕ್ತಿ, ಬೆಂಗಳೂರು ಪಿ.ಇ.ಎಸ್.ಯೂನಿವರ್ಸಿಟಿ ಕಾನೂನು ವಿಭಾಗದ ಡೀನ್ ಪ್ರೊ.ಸಂದೀಪ ದೇಸಾಯಿ ಅವರು, ಬೌದ್ಧಿಕ ಆಸ್ತಿ ಹಕ್ಕುಗಳಾದ ಪೇಟೆಂಟ್ ರೈಟ್ಸ್, ಕಾಫಿ ರೈಟ್ಸ್, ಟ್ರೇಡ್ ಮಾರ್ಕ್ಸ್, ಟ್ರೆಡ್ ಸಿಕ್ರೆಟ್ಸ್ ಮಹತ್ವ, ಬಳಕೆ ಮತ್ತು ಕಾನೂನಾತ್ಮಕ ಸಲಹೆಗಳ ಕುರಿತು ವಿವಿಧ ಆಯಾಮಗಳನ್ನು ಪ್ರಸ್ತುತಪಡಿಸಿದರು.

ಸುಮಾರು 270ಕ್ಕೂ ಮೇಲ್ಪಟ್ಟು ವಿವಿಧ ರಾಜ್ಯಗಳ ಪ್ರಾಧ್ಯಾಪಕರು, ಕಾರ್ಪೋರೆಟ್ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ವೆಬಿನಾರ್‌ದಲ್ಲಿ ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ಕಳುಹಿಸಿ ಕೊಡಲಾಯಿತು. ಪ್ರಾಚಾರ್ಯ ಪ್ರೊ.ಪಿ.ಬಿ.ಮುನ್ಯಾಳ, ಪ್ರೊ.ಎಸ್.ಟಿ. ಧನೋಡೆ ಭಾಗವಹಿಸಿದ್ದರು.