Oplus_131072 
ಜಿಲ್ಲೆ

ಯರಿಯೂರಿನಲ್ಲಿ ಮಂಟೇಸ್ವಾಮಿ ಕೊಂಡೋತ್ಸವ

ಎ. ಆರ್. ರಘುರಾಮ

ಸಾವಿರಾರು ಭಕ್ತರು ಭಾಗಿ

ವಿಜಯವಾಣಿ ಸುದ್ದಿಜಾಲ ಯಳಂದೂರು:

ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಮಂಟೇಸ್ವಾಮಿ ಕೊಂಡೋತ್ಸವ ಸೋಮವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಕೊಂಡೋತ್ಸವದ ನಿಮಿತ್ತ ಗ್ರಾಮದ ಮುಂಭಾಗದಲ್ಲಿರುವ ಶ್ರೀ ಮಾರಮ್ಮ ದೇಗುಲದ ಬಳಿ ಕೊಂಡದ ಬೆಂಕಿಯನ್ನು ಹಾಕಲಾಗಿತ್ತು. ಬಾವಿಯಿಂದ ಗಂಗಾಜಲ ತಂದು ಪೂಜೆ ಸಲ್ಲಿಸಿ, ಹೂವು, ತಳಿರು ತೋರಣಗಳಿಂದ ಅಲಂಕೃತ ಸತ್ತಿಗೆ, ಸೂರಿಪಾನಿಗಳನ್ನು ಹೊತ್ತ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯಲ್ಲಿ ಸಾಗಿ ಬಂದರು. ದಾರಿಯುದ್ದಕ್ಕೂ ಹರಕೆ ಹೊತ್ತ ಭಕ್ತರು, ಕರ್ಪೂರದ ಆರತಿ ಮಾಡಿ, ತೆಂಗಿನ ಕಾಯಿಗಳನ್ನು ಒಡೆದು ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಭಕ್ತರ ನಡುವೆ ಕೊಂಡದ ಬೆಂಕಿಯನ್ನು ಹಲವು ಭಕ್ತರ ಹಷೋದ್ಘಾರಗಳ ನಡುವೆ ಹಾಯ್ದರು. ಹೆದ್ದಾರಿ ಬಳಿಯಲ್ಲೇ ಕೊಂಡೋತ್ಸವ ನಡೆದಿದ್ದರಿಂದ ವಾಹನ ಸಂಚಾರಕ್ಕೆ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು. ವಿವಿಧ ಪಕ್ಷಗಳ ಮುಖಂಡರು, ವಿವಿಧ ಜಿಲ್ಲೆ, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.