ಜಿಲ್ಲೆ

ಹೊಲಗದ್ದೆಗಳಲ್ಲಿ ಗಜಪಡೆ ಉಪಟಳ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲಿ ಕಾಡಾನೆ ಹಾವಳಿ ಸಾಮಾನ್ಯ ಎಂಬAತಾಗಿದ್ದು, ಕೃಷಿಕರು ಬೆಳೆದ ಫಸಲು ಕೈ ಸೇರದೆ ಕಂಗಾಲಾಗಿದ್ದಾರೆ. ಪ್ರತಿ ದಿನವೂ ಒಂದೊAದು ಜಾಗದಲ್ಲಿ ಕಾಣಿಸಿಕೊಳ್ಳುವ ಕಾಡಾನೆ ಹಿಂಡು ಮನಸ್ಸೋ ಇಚ್ಛೆ ತಿಂದು ಅದರ ಮೂರು ಪಟ್ಟು ನಾಶ ಮಾಡಿ ತೆರಳುತ್ತಿವೆ. ಆನೆಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆಗದೆ ಅರಣ್ಯ ಇಲಾಖೆಯೂ ಕಂಗೆಟ್ಟು ಕುಳಿತಿದೆ.

ಮೊದಲೆಲ್ಲಾ ಸಂಜೆಯಾಗುತ್ತಿದ್ದAತೆ ಕಾಡಾನೆಗಳು ಕಾಡಿನಿಂದ ಹೊರಗೆ ಬಂದು ಜನವಸತಿ ಪ್ರದೇಶಗಳಲ್ಲಿ ಅಲೆದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದ್ದವು. ಆದರೆ ಈ ವರ್ಷ ಹಗಲಿನಲ್ಲೇ ಆನೆಗಳು ದರ್ಶನ ಕೊಡುತ್ತಿವೆ. ರಾಜಾರೋಷವಾಗಿ ಹೆದ್ದಾರಿಗಳಲ್ಲೂ ತಿರುಗಾಡುತ್ತಿವೆ. ಬೆಳ್ಳಂಬೆಳಗ್ಗೆ, ಮಧ್ಯಾಹ್ನ…ಹೀಗೆ ಹೊತ್ತುಗೊತ್ತಿನ ಅರಿವಿಲ್ಲದೆ ಎಲ್ಲೆಂದರಲ್ಲಿ ಆನೆಗಳು ಕಾಣಿಸಿಕೊಳ್ಳಲಾರಂಭಿಸಿವೆ.

2 ದಿನಗಳ ಹಿಂದೆ 7ನೇ ಹೊಸಕೋಟೆ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಒಂಟಿ ಸಲಗವೊಂದು ಸುತ್ತಾಡಿ ವಾಹನ ಸವಾರರಲ್ಲಿ ಭೀತಿ ಸೃಷ್ಟಿಸಿತ್ತು. ಒಂದು ತಿಂಗಳ ಹಿಂದೆಯೂ ಇಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ರಸ್ತೆಯಲ್ಲಿ ಅಡ್ಡಾಡಿದ್ದ ಆನೆ ನಂತರ ಕಾಫಿ ತೋಟದೊಳಗೆ ತೆರಳಿ ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧ್ವಂಸ ಮಾಡಿತ್ತು. ಸುಂಟಿಕೊಪ್ಪ-ಚೆಟ್ಟಳ್ಳಿ ರಸ್ತೆಯ ಮತ್ತಿಕಾಡು, ಭೂತನಕಾಡು, ಸಿದ್ದಾಪುರ-ಮರಗೋಡು ರಸ್ತೆಯ ಅತ್ತಿಮಂಗಲ, ಅರೆಕಾಡು, ಸಿದ್ದಾಪುರ-ಪಿರಿಯಾಪಟ್ಟಣ ರಸ್ತೆಯ ಮಾಲ್ದಾರೆ, ಗೋಣಿಕೊಪ್ಪ-ಹುಣಸೂರು ರಸ್ತೆಯ ಆನೆಚೌಕೂರು ಭಾಗದ ಮತ್ತಿತರ ಕಡೆಗಳಲ್ಲಿ ಹಗಲಿನಲ್ಲಿ ಆನೆಗಳ ಸಂಚಾರ ಸಾಮಾನ್ಯವಾಗಿದ್ದು, ವಾಹನ ಸವಾರರು ಆತಂಕದಿAದಲೇ ತಿರುಗಾಡುವಂತಾಗಿದೆ.

ಅರಣ್ಯ ಇಲಾಖೆ ವತಿಯಿಂದ ಆಗಾಗ್ಗೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಂದು ತೋಟದಿಂದ ಓಡಿಸಿದರೆ ಮತ್ತೊಂದು ತೋಟದಲ್ಲಿ ಆಶ್ರಯ ಪಡೆದು ಪರಿಸ್ಥಿತಿ ತಿಳಿಯಾದ ಕೂಡಲೇ ಮೊದಲಿದ್ದ ಸ್ಥಳಕ್ಕೇ ವಾಪಸ್ ಬರುತ್ತಿವೆಯೇ ಹೊರತು ಶಾಶ್ವತವಾಗಿ ಈ ಆನೆಗಳು ಕಾಡು ಸೇರುತ್ತಿಲ್ಲ. ಇದರಿಂದಾಗಿಯೇ ಅರಣ್ಯದಂಚಿನ ಪ್ರದೇಶದಲ್ಲಿ ಕಾಡಾನೆಗಳಿಂದಾಗಿ ದೊಡ್ಡ ಮಟ್ಟಿಗೆ ಸಮಸ್ಯೆ ಆಗುತ್ತಿದೆ.

ಕುಶಾಲನಗರ ಸಮೀಪದ ಆನೆಕಾಡು, ಅತ್ತೂರು ಮೀಸಲು ಅರಣ್ಯದ ಅಂಚಿನಲ್ಲಿರುವ ಹೇರೂರು, ಕಲ್ಲೂರು, ಅಂದಗೋವೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿAದ ಈಚೆಗೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಸಂಜೆ 6 ಗಂಟೆ ನಂತರ ಮನೆಯಿಂದ ಹೊರಬಾರದ ವಾತಾವರಣ ಈ ಭಾಗದಲ್ಲಿ ನಿರ್ಮಾಣ ಆಗಿದೆ. ಕಾಡಿನಿಂದ ಹೊರಬರುವ ಆನೆಗಳ ಗುಂಪು ರೈತರ ಕಾಫಿ ತೋಟ, ಹೊಲ-ಗದ್ದೆಗಳಿಗೆ ದಾಳಿ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿವೆ.

ಸುವರ್ಣಗೆಡ್ಡೆ, ಕೆಸ, ಗೆಣಸು, ಬಾಳೆ, ತೆಂಗು, ಅಡಿಕೆ, ಜೋಳ, ಕಾಫಿ, ಭತ್ತ, ಶುಂಠಿ ಬೆಳೆಗಳಿಗೆ ದಾಳಿ ಮಾಡುವ ಕಾಡಾನೆಗಳು ಬೇಕಾಬಿಟ್ಟಿಯಾಗಿ ತಿಂದು, ತುಳಿದು ನಾಶ ಮಾಡುತ್ತಿವೆ. ಒಂದು ಕಡೆಯಲ್ಲಿ ಗುಂಪಿನಲ್ಲಿ ಬರುವ ಕಾಡಾನೆಗಳ ದಾಳಿ ಮಾಡಿದರೆ ಮತ್ತೊಂದು ಒಂಟಿ ಆನೆ ಇಲ್ಲಿ ಆತಂಕ ಹುಟ್ಟಿಸುವ ರೀತಿಯಲ್ಲಿ ತಿರುಗಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು. ಅನೇಕ ಬಾರಿ ಇಲ್ಲಿ ಓಡಾಡುವ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ರೈತರಿಗೆ ಈ ಆನೆಗಳು ಮುಖಾಮುಖಿ ಆಗಿ ಸಾವಿನ ದವಡೆಯಿಂದ ಪಾರಾಗಿರುವ ಘಟನೆಯೂ ನಡೆದಿದೆ.

ನಾಕೂರು-ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ 5-6 ಆನೆಗಳು ಇಲ್ಲಿಯ ಕೃಷಿಕರ ಪಾಲಿಗೆ ವಿಲನ್‌ಗಳಾಗಿವೆ. ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ ಕಳೆದೆರೆಡು ತಿಂಗಳಿAದ ನಿರಂತರವಾಗಿ ಲಗ್ಗೆಯಿಟ್ಟು ತೋಟಗಳಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತಿವೆ. ಈ ವ್ಯಾಪ್ತಿಯಲ್ಲಿ ಚಂದ್ರಶೇಖರ್, ಅರುಣ್ ಚಂಗಪ್ಪ, ನಂಜೇಗೌಡ, ಸುಜಾತ ಮತ್ತಿತರರ ಕೃಷಿಕರ ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಕಾಫಿ, ತೆಂಗು, ಅಡಕೆ, ಬಾಳೆ ಬೆಳೆಗಳನ್ನು ನಾಶಗೊಳಿಸಿವೆ.

ವಿಷಯವನ್ನು ಈಗಾಗಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಇಲ್ಲಿಯ ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ಪಡೆ ಸೇರಿದಂತೆ ಅರಣ್ಯ ಇಲಾಖೆ ತಂಡ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿದೆ. ಆದರೆ ಒಂದು ಕಡೆಯಿಂದ ಕಾಡಿಗೆ ನುಗ್ಗುವ ಆನೆಗಳು ಮತ್ತೊಂದು ಕಡೆಯಿಂದ ಮತ್ತೆ ತೋಟಗಳಿಗೆ ನುಗ್ಗುವ ಮೂಲಕ ಕೃಷಿಕರಿಗೆ ಮಾತ್ರವಲ್ಲದೆ ಅರಣ್ಯ ಇಲಾಖೆಗೂ ತಲೆನೋವಾಗಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಮ್ಮ ಭಾಗದಲ್ಲಿ ಆನೆ ಹಾವಳಿ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇದೀಗ ನಮ್ಮ ತೋಟದಲ್ಲಿ ಕಾಫಿ, ಅಡಕೆ, ತೆಂಗು ಸೇರಿದಂತೆ ಸಾಕಷ್ಟು ಪ್ರಮಾನದಲ್ಲಿ ಗಿಡಗಳನ್ನು ನಾಶ ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಆನೆ ಕಂದಕ, ಸೋಲಾರ್ ಬೇಲಿ ಅಥವಾ ರೈಲ್ವೇ ಬ್ಯಾರಿಕೆಡ್ ಅಳವಡಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಚಂದ್ರಶೇಖರ್, ಹೇರೂರು ನಿವಾಸಿ

ಹೇರೂರು ಭಾಗದಲ್ಲಿ 5-6 ಆನೆಗಳು ತಿರುಗಾಡುತ್ತಿವೆ. ವಿಷಯ ನಮ್ಮ ಗಮನಕ್ಕೆ ಬಂದ ಕೂಡಲೇ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗಿದೆ. ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ಪಡೆ ಮತ್ತು ಇತರ ಸಿಬ್ಬಂದಿ ಕಾಯಾರಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟಲಾಗಿದೆ. ಕೃಷಿ ನಷ್ಟಕ್ಕೆ ಸಂಬAಧಿಸಿದAತೆ ಸರ್ಕಾರದ ನಿಯಮಗಳ ಪ್ರಕಾರ ಪರಿಹಾರ ಕೊಡಲಾಗುವುದು.
ರತನ್, ವಲಯ ಅರಣ್ಯಾಧಿಕಾರಿ, ಕುಶಾಲನಗರ