ಯರಗಟ್ಟಿ: ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಆದಿಶಕ್ತಿ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ನಡೆದ ಅದ್ದೂರಿ ಮೆರವಣಿಗೆಯೊಂದಿಗೆ ದೇವಿ ಪುರ ಪ್ರವೇಶ ನೆರವೇರಿತು.
ಊರ ಹಬ್ಬವೆಂದೇ ಕರೆಯಲಾಗುವ ದೇವಿಯರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣವೇ ಕಳೆಗಟ್ಟಿದ್ದು, ಎಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ದುರ್ಗಾದೇವಿ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಡೊಳ್ಳು ಮತ್ತು ತಮಟೆ, ಕರಡಿ ಮಜಲು, ಕುದುರೆ ಕುಣಿತ ಸೇರಿ ವಿವಿಧ ವಾದ್ಯಮೇಳ ಮೆರವಣಿಗೆಯಲ್ಲಿದ್ದವು. ಮುತ್ತೈದೆಯರ ಕುಂಭಾರತಿಯೊಂದಿಗೆ ಸೀಮಿಯಿಂದ ದೇವಸ್ಥಾನದವರೆಗೆ ಮೆರವಣಿಗೆ ಸಾಗಿಬಂತು. ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆದಿಶಕ್ತಿ ದುರ್ಗಾದೇವಿ ಪುರಪ್ರವೇಶವಾಯಿತು.