ಜಿಲ್ಲೆ

ಯರದೊಡ್ಡಿ ಬಸವೇಶ್ವರ ಜಾತ್ರೆ ಅದ್ದೂರಿ

ಅಶೋಕ್ ಕುಮಾರ್ ಎನ್

ಮುದಗಲ್: ಯರದೊಡ್ಡಿ ಗ್ರಾಮದ ಆರಾಧ್ಯ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.

ಜಾತ್ರೆ ಅಂಗವಾಗಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ದೇವಾಲಯಕ್ಕೆ ಕಲಶಾರೋಹಣ ಜರುಗಿತು. ನಂತರ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಹೂವು, ಕಾಯಿ, ಕರ್ಪೂರ, ಮುಡಿಪು ಸಮರ್ಪಿಸಿದರು.

ಸಂಜೆ 5 ಗಂಟೆಗೆ ಉಚ್ಛಾಯ ಎಳೆಯಲಾಯಿತು. ಬಸನಗೌಡ ತೋಟದ್, ಬಸನಗೌಡ ಯರದೊಡ್ಡಿ, ಹನಮನಗೌಡ, ಗೋಷ ಬಸವರಾಜ, ನಾಗಪ್ಪ ಕಡಬೂರ, ಗ್ರಾಪಂ ಸದಸ್ಯ ಮಾನಸಿಂಗ್ ರಾಠೋಡ್, ಮಾಜಿ ಸದಸ್ಯ ಆನಂದ ಕುಮಾರ, ದುರುಗಪ್ಪ ಮರಳಿ, ಯಮನೂರ, ದ್ಯಾವಪ್ಪ , ಪರಶುರಾಮ, ಪ್ರದೀಪ್ ಕುಮಾರ, ಮಹಾಂತೇಶ, ಅಮರೇಗೌಡ ಮೇಲ್ಮಾಳಗಿ ಅನೇಕರು ಪಾಲ್ಗೊಂಡಿದ್ದರು.