ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಕೆ.ಪಿ.ಎಸ್ ಶಾಲೆ ವಿದ್ಯಾರ್ಥಿನಿಯರಾದ ಅಲ್ಮಾಸ ಬಾಗವಾನ, ಪೂಜಾ ಬಿರಾದಾರ ಅವರಿಗೆ ಅರ್ಜುನ ಮಲ್ಲೇವಾಡಿ, ಶೈಲಾ ಹಳೇಮನಿ ಪ್ರಶಸ್ತಿ ಪತ್ರ ನೀಡಿದರು. 
ಜಿಲ್ಲೆ

ಯಂಕಂಚಿ ಶಾಲೆ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಬ್ರಹ್ಮದೇವನಮಡು: ವಿಜಯಪುರದ ಮರಾಠಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪ್ರಾಚ್ಯ ಪ್ರಜ್ಞೆಯ ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಸಿಂದಗಿ ತಾಲೂಕಿನ ಯಂಕಂಚಿ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿ ಅಲ್ಮಾಸ ಬಾಗವಾನ ಹಾಗೂ ಪೂಜಾ ಬಿರಾದಾರ ಪ್ರಥಮ ಸ್ಥಾನ ಪಡೆದು ಸತತವಾಗಿ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರಕಲೆಯಲ್ಲಿ ಸಪ್ನಾ ಕುಂಬಾರ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಶೈಲಾ ಹಳೇಮನಿ, ಮಾರ್ಗದರ್ಶಿ ಶಿಕ್ಷಕ ಅರ್ಜುನ ಮಲ್ಲೇವಾಡಿ, ಶಾಲೆಯ ಉಪಪ್ರಾಚಾರ್ಯ ಜಿ.ಎಂ.ಗುಡಿಮನಿ, ಶಾಲೆ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.