ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ ಮಾತನಾಡಿದರು.  
ಜಿಲ್ಲೆ

ಚನ್ನಮ್ಮಳ ಧೈರ್ಯ, ಆದರ್ಶ ಮೈಗೂಡಿಸಿಕೊಳ್ಳಲು ಸಲಹೆ ನೀಡಿದ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ

ಯಲಬುರ್ಗಾ: ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ವೀರ ಮಹಿಳೆ ರಾಣಿ ಚನ್ನಮ್ಮಳ ಆದರ್ಶ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ವೀರಶೈವ ಪಂಚಮಸಾಲಿ ಸಮುದಾಯದ ತಾಲೂಕು ಕಾರ್ಯದರ್ಶಿ ರಾಜಶೇಖರ ನಿಂಗೋಜಿ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ಚನ್ನಮ್ಮಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚಮಸಾಲಿ ಸಮುದಾಯದವರು ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಸರ್ಕಾರ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಸಮುದಾಯದ ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಚನ್ನಮ್ಮಳ ಧೈರ್ಯ, ಸಾಹಸ ಮೆಚ್ಚಬೇಕು ಎಂದರು.

ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ಸುರೇಶಗೌಡ ಶಿವನಗೌಡ್ರ, ಶರಣಪ್ಪ ಕೊಪ್ಪಳ, ಸಿದ್ರಾಮೇಶ ಬೇಲೇರಿ, ನಿಂಗಪ್ಪ ಮೇಟಿ, ಬಸವಲಿಂಗಪ್ಪ ಕೊತ್ತಲ್, ಶಿವರಾಜಗೌಡ ಪಾಟೀಲ್, ಸ.ಶರಣಪ್ಪ ಪಾಟೀಲ್, ಪ್ರಭು ಕಲಬುರ್ಗಿ, ಬಸವರಾಜ ಶ್ಯಾಗೋಟಿ ಸೇರಿದಂತೆ ಇನ್ನಿತರರು ಇದ್ದರು.