ಜಿಲ್ಲೆ

ಸಾಲ ಮರುಪಾವತಿಸಿದರೆ ಸಹಕಾರಿ ರಂಗ ಅಭಿವೃದ್ಧಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಯಲ್ಲಾಪುರ: ಸಾಲ ಪಡೆದು, ಪ್ರಾಮಾಣಿಕವಾಗಿ ಮರು ಪಾವತಿ ಮಾಡುವ ಬಡ ವರ್ಗದ ಜನರೇ ಸಹಕಾರಿ ಸಂಸ್ಥೆಗಳು ಬೆಳೆಯಲು ಕಾರಣೀಕರ್ತರು ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಪಟ್ಟಣದ ಹುಲ್ಲೋರಮನೆ ಗಜಾನನ ಮಾರುತಿ ಸಭಾಭವನದಲ್ಲಿ ಎಲ್‌ಎಸ್‌ಎಂಪಿ ಸೊಸೈಟಿ ಚುನಾವಣೆ ವಿಜೇತರು ಮತ್ತು ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಯ ಚುನಾವಣೆಯಲ್ಲೂ ಹಣದ ಆಮಿಷವೊಡ್ಡಿ ಮತದಾರರನ್ನು ಸೆಳೆಯುವ ಹಂತಕ್ಕೆ ಬಂದು ತಲುಪಿರುವುದು ವಿಷಾದದ ಸಂಗತಿ. ಹಣದಿಂದ ಎಲ್ಲವನ್ನೂ ಖರೀದಿಸುತ್ತೇವೆ ಎಂಬ ಅಹಂಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಸಂಸ್ಥೆಯ ನಿರ್ದೇಶಕ ನರಸಿಂಹ ಕೋಣೆಮನೆ ಮಾತನಾಡಿ, ಅಪಪ್ರಚಾರ, ಹಣದ ಆಮಿಷ ಯಾವುದಕ್ಕೂ ಬಗ್ಗದೇ ಸಂಸ್ಥೆಯ ಸದಸ್ಯರು ಸಂಸ್ಥೆಯ ಹಿತ ಕಾಯುವ ತಂಡವನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಸಹಕಾರಿ ಸಂಘದಲ್ಲಿ ರಾಜಕೀಯ ಬೆರೆಸುವ ದುರುದ್ದೇಶ ಹೊಂದಿದವರನ್ನು ಸೋಲಿಸಿ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.
ಸಂಸ್ಥೆ ನಿರ್ದೇಶಕ ನಾಗರಾಜ ಕವಡಿಕೆರೆ, ಟಿ.ಆರ್. ಹೆಗಡೆ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಪ್ರಮುಖರಾದ ಗೋಪಾಲಕೃಷ್ಣ ಭಟ್ಟ
ಹಂಡ್ರಮನೆ, ಮಹಾಬಲೇಶ್ವರ ಭಟ್ಟ ಮಾಲದಮನೆ, ಸುಬ್ಬಣ್ಣ ಉದ್ದಾಬೈಲ, ಸುಬ್ರಾಯ ಭಟ್ಟ ಗುಂಡ್ಕಲ್, ಮಾದೇವ ನಾಯ್ಕ ಇತರರು ಮಾತನಾಡಿದರು.
ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ ಅಧ್ಯಕ್ಷತೆ ವಹಿಸಿದ್ದರು. ನೂತನ ನಿರ್ದೇಶಕರಾದ ತಿಮ್ಮಣ್ಣ ಘಟ್ಟಿ, ಹನುಮಂತ ಕೊರವರ, ಗಾಬ್ರಿಯಲ್ ಫರ್ನಾಂಡೀಸ್, ಶ್ಯಾಮಲಾ ಹೆಗಡೆ, ಪ್ರಭಾ ಭಾಗ್ವತ, ಅಪ್ಪು ಆಚಾರಿ, ಮಹಾಬಲೇಶ್ವರ ಗುಮ್ಮಾನಿ, ಎನ್. ಗೇರಗದ್ದೆ, ಎಲ್.ಪಿ. ಭಟ್ಟ ಗುಂಡ್ಕಲ್, ಸುಬ್ರಾಯ ಭಾಗ್ವತ, ಪರಮೇಶ್ಚರ ಕೊಂಬೆ, ತಿಮ್ಮಣ್ಣ ಭಟ್ಟ ಜಡ್ಡಿಗದ್ದೆ ಇತರರಿದ್ದರು. ಸುಬ್ಬಣ್ಣ ದಾನ್ಯಾನಕೊಪ್ಪ ನಿರ್ವಹಿಸಿದರು.