ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಭೂಸಪ್ಪ ಚೌಕ್‌ನ ಕುರುಬರ ಓಣಿಯ ಶ್ರೀ ಯಲ್ಲಮ್ಮದೇವಿ, ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ವಿಠ್ಠಲ- ರುಕ್ಮಿಣಿ ದೇವರ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದಿ0ದ ಜರುಗಿತು.
ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಜಾತ್ರೆಯ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದ್ಯಾಮವ್ವ, ದುರ್ಗಮ್ಮ, ಆಂಜನೇಯ, ಕರಿಯಮ್ಮ ದೇವಸ್ಥಾನಗಳಿಗೆ ದೀಪ ಕೊಡಲಾಯಿತು. ಭಕ್ತಿಯಿಂದ ಪಾಲ್ಗೊಂಡಿದ್ದ ನೂರಾರು ಭಕ್ತರು ಭಂಡಾರ ಎರಚುತ್ತ ದೇವಸ್ಥಾನಗಳಿಗೆ ತೆರಳಿದರು.
ರಾತ್ರಿ ಶ್ರೀ ವಿಠ್ಠಲ- ರುಕ್ಮಿಣೀ ದೇವರ ಪೋತಿ ಸ್ಥಾಪನೆ ನೆರವೇರಿಸಲಾಯಿತು. ನಂತರ ಹರಿಭಕ್ತರಿಂದ ಕೀರ್ತನೆ ಹಾಗೂ ಭಜನೆ ಜರುಗಿತು. ಡೊಳ್ಳಿನ ಪದಗಳನ್ನು ಪಸ್ತುತಪಡಿಸಲಾಯಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮೇ 17ರಂದು ಬೆಳಗ್ಗೆ 5 ಗಂಟೆಗೆ ಮಹಾರುದ್ರಾಭಿಷೇಕ, ಬ್ರಹ್ಮದೇವರ ಪೂಜೆ, 11 ಗಂಟೆಗೆ ದಿಂಡಿ ಉತ್ಸವ, ಸಂಜೆ ಡೊಳ್ಳಿನ ಪದಗಳ ಪ್ರಸ್ತುತಿ ಇರಲಿದೆ ಎಂದು ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಟಗಿ ತಿಳಿಸಿದ್ದಾರೆ.