ಕಿಕ್ಕೇರಿ ಹೋಬಳಿಯ ಸಿದ್ದಾಪುರದಲ್ಲಿ ಭಾನುವಾರ ಜರುಗಲಿರುವ ಯಲ್ಲಮ್ಮದೇವಿ ದೇಗುಲ ಉದ್ಘಾಟನೆ ಸಮಾರಂಭಕ್ಕೆ ಸಿದ್ಧವಾಗಿರುವುದು. 
ಜಿಲ್ಲೆ

ಯಲ್ಲಮ್ಮ ದೇಗುಲ ಲೋಕಾರ್ಪಣೆ ಇಂದು

ಲೋಕೇಶ್ ಮನು. ಡಿ

ಕಿಕ್ಕೇರಿ: ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಫೆ.23ರಂದು ಯಲ್ಲಮ್ಮದೇವಿ ದೇಗುಲ ಲೋಕಾರ್ಪಣೆಯಾಗಲಿರುವ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಪೂಜಾ ಕೈಂಕರ್ಯ ಆರಂಭವಾದವು.

ಗ್ರಾಮದೇವಿ ರೇಣುಕಾದೇವಿ ಯಲ್ಲಮ್ಮದೇವಿ ದೇಗುಲವನ್ನು ಗ್ರಾಮಸ್ಥರು ಒಗ್ಗೂಡಿ ಜೀರ್ಣೋದ್ಧಾರ ಮಾಡಿದ್ದು, ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರು-ತೋರಣ, ಕೇಸರಿ ಧ್ವಜ, ವಿದ್ಯುತ್‌ದೀಪಗಳ ಅಲಂಕರಿಸಲಾಗಿದೆ.

ಶನಿವಾರ ಗೋಧೂಳಿ ಲಗ್ನದಲ್ಲಿ ಆಚಾಯ್ ಪ್ರಾರ್ಥನೆ, ತೀರ್ಥ ಸಂಗ್ರಹಣೆ, ಗೋಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ರಕ್ಷಾಬಂಧನ, ಧ್ವಜಾರೋಹಣ, ಕಳಸ ಸ್ಥಾಪನೆ, ರಾಕ್ಷೋಘ್ನ, ಕ್ಷೇತ್ರಪಾಲಕ, ಗಣಪತಿ, ವಾಸ್ತು ಹೋಮ, ದೇವಿ ಶಿಲಾಬಿಂಬ ಜಲಾಧಿವಾಸ, ಕ್ಷೀರ, ಧಾನ್ಯ, ಕನಕ, ರತ್ನ, ಫಲ-ಪುಷ್ಪ ಹಾಗೂ ಶಯ್ಯಧಿವಾಸ, ಲಘು ಪೂರ್ಣಾಹುತಿ, ತೀರ್ಥಪ್ರಸಾದ, ಅಷ್ಟಬಂಧನ ಪ್ರತಿಷ್ಟೆ, ನೇತ್ರೋನ್ಮಿಲನದಂತಹ ವಿವಿಧ ಪೂಜಾ ಕೈಂಕರ್ಯ ಜರುಗಲಿದೆ.

ಫೆ.23ರ ಭಾನುವಾರ ವಿಮಾನಗೋಪುರ ಕಲಶ ಸ್ಥಾಪನೆ, ನವಗ್ರಹ, ಸುದರ್ಶನ, ಅಷ್ಟಲಕ್ಷ್ಮೀ, ದುರ್ಗಾ ಹೋಮ, ಮಹಾಪೂರ್ಣಾಹುತಿ, ಉದ್ಯಾಪನೆ, ಗ್ರಾಮ ಪ್ರದಕ್ಷಿಣೆ, ಮಹಾಕುಂಭಾಭಿಷೇಕ, ದೇವಿ ಮೂಲಮೂರ್ತಿಗೆ ಫಲಪಂಚಾಮೃತ ಅಭಿಷೇಕ, ಕದಳಿ ತೋಮಾಲೆ ಪುಷ್ಪಾಲಂಕಾರ, ಗೋವು, ಕನ್ಯಾ, ದೀಪ, ದರ್ಪಣ ದರ್ಶನ, ಕದಲಿ ಛೇದನ, ಕೂಷ್ಮಾಂಡಬಲಿ, ಅಷ್ಟಾವಾಧನ ಸೇವೆ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನದಾಸೋಹ ಸೇವೆ ನಡೆಯಲಿದೆ ಎಂದು ದೇಗುಲ ಸಮಿತಿಯವರು ತಿಳಿಸಿದ್ದಾರೆ.

ನಂತರ ಸಭಾ ಕಾರ್ಯಕ್ರಮ ಜರುಗಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯ ಹಳ್ಳಿಕಾರ ಮಹಾಸಂಸ್ಥಾನದ ಉಪಾಧ್ಯಕ್ಷ ಕೆ.ಎಂ.ನಾಗರಾಜು, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಪ್ರೀತಂಗೌಡ, ಕೆ.ಬಿ.ಚಂದ್ರಶೇಖರ್, ಬಿ. ಪ್ರಕಾಶ್, ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಕೆಪಿಸಿಸಿ ಸದಸ್ಯ ಸುರೇಶ್, ಜಿ.ಪಂ ಮಾಜಿ ಉಪಾಧ್ಯಕ್ಷರಾದ ಕೆ.ಎಸ್. ಪ್ರಭಾಕರ್, ಅಂಬರೀಷ್ ಮತ್ತಿತರರು ಭಾಗವಹಿಸಲಿದ್ದಾರೆ.