ಯಲಬುರ್ಗಾದ ಮೂರನೇ ವಾರ್ಡ್‌ನ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಿಡಬ್ಲುೃಡಿ ಇಇ ಹೇಮಂತರಾಜ, ಎಇಇ ಬಿ.ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ನಾಗೇಶ, ನಿರ್ಮಿತಿ ಕೇಂದ್ರದ ಶಶಿಧರ ಪಾಟೀಲ್, ಮಹಾದೇವಪ್ಪ ಇದ್ದರು.  
ಜಿಲ್ಲೆ

ಮಕ್ಕಳಿಗೆ ಆಟದ ಸಾಮಗ್ರಿ ಒದಗಿಸಿ

ಯಲಬುರ್ಗಾ: ಪಟ್ಟಣದ ವಿವಿಧೆಡೆ ಸರ್ಕಾರದ ಯೋಜನೆಯಡಿ ನಿರ್ಮಾಣಗೊಂಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಟಿಪ್ಪುಸುಲ್ತಾನ್ ವೃತ್ತದಿಂದ ನಂ.2 ಶಾಲೆವರೆಗೆ ನಗರೋತ್ಥಾನ ಯೋಜನೆಯಡಿ ಸಿಸಿ ರಸ್ತೆ, ಫೆವರ್ಸ್ ಕಾಮಗಾರಿ, 3ನೇ ವಾರ್ಡ್‌ನಲ್ಲಿ ಕೆಕೆಆರ್‌ಡಿಬಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರ ಕಟ್ಟಡ ಪರಿಶೀಲಿಸಿದರು. ಮಕ್ಕಳಿಗೆ ಆಟದ ಪರಿಕರ ಒದಗಿಸುವಂತೆ ನಿರ್ಮಿತಿ ಅಧಿಕಾರಿಗಳಾದ ಶಶಿಧರ ಪಾಟೀಲ್, ಮಹಾದೇವಪ್ಪಗೆ ಡಿಸಿ ಸೂಚಿಸಿದರು. ಇಲ್ಲಿ ನಡೆದಿರುವ ಕಾಮಗಾರಿ ಕುರಿತು ಪಪಂ ಮುಖ್ಯಾಧಿಕಾರಿ ನಾಗೇಶ ಡಿಸಿಗೆ ವಿವರಿಸಿದರು.

ಪಿಜಿ ಸೆಂಟರ್, ವಸತಿ ಶಾಲೆಗೆ ಭೇಟಿ: ಸ್ನಾತಕೋತ್ತರ ಕೇಂದ್ರದಲ್ಲಿ ಪಿಡಬ್ಲುೃಡಿಯಿಂದ ನಿರ್ಮಾಣಗೊಳ್ಳುತ್ತಿರುವ ಕಾಂಪೌಂಡ್ ಕಾಮಗಾರಿ ವೀಕ್ಷಿಸಿದರು. ಇಇ ಹೇಮಂತರಾಜ ಕಾಮಗಾರಿ ಕುರಿತು ಮಾಹಿತಿ ನೀಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಸಮಸ್ಯೆ ಆಲಿಸಿದರು. ಮೆನು ಚಾರ್ಟ್‌ನಂತೆ ಊಟ, ಉಪಹಾರ ಕೊಡುತ್ತಿದ್ದಾರಾ? ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಾರಾ ಎಂದು ಡಿಸಿ ಪ್ರಶ್ನಿಸಿದರು. ವಿದ್ಯಾರ್ಥಿಗಳು ಎಲ್ಲ ಸರಿಯಾಗಿದೆ ಎಂದರು. ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಸೌಕರ್ಯ ಒದಗಿಸಬೇಕು ಎಂದು ಪ್ರಾಚಾರ್ಯ ಅಮೀದ್‌ಗೆ ಸೂಚಿಸಿದರು.

ಗುಣಮಟ್ಟದ ಕಾಮಗಾರಿ ನಡೆಸಿ: ಸರ್ಕಾರದಿಂದ ಅನುಷ್ಠಾನವಾಗುವ ಯಾವುದೇ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ವೇಳೆಗೆ ಕೆಲಸ ಪೂರ್ಣಗೊಳಿಸಬೇಕು. ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪಿಡಬ್ಲುೃಡಿ ಎಇಇ ಮಲ್ಲಿಕಾರ್ಜುನ, ಅಧಿಕಾರಿಗಳಾದ ಶಶಿಧರ ಸಕ್ರಿ, ಶಿವಶಂಕರ ಕರಡಕಲ, ಇಂಜಿನಿಯರ್ ಉಮೇಶ್ ಬೇಲಿ ಇತರರಿದ್ದರು.