ಯಲಬುರ್ಗಾ ತಾಲೂಕಿನ ಲಿಂಗನಬಂಡಿ ರೈಲು ನಿಲ್ದಾಣಕ್ಕೆ ಜಗದ್ಗುರು ಶ್ರೀ ಮೌನೇಶ್ವರ ಹೆಸರಿಡುವಂತೆ ಒತ್ತಾಯಿಸಿ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಜಿಲ್ಲಾ ಒಕ್ಕೂಟದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಕೊಪ್ಪಳದಲ್ಲಿ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷ ಮೌನೇಶ ಬಡಿಗೇರ್, ಪದಾಧಿಕಾರಿಗಳಾದ ಕೃಷ್ಣಾ ಬಡಿಗೇರ್, ರಾಜಾಬಕ್ಷಿ, ಮುತ್ತು ವಡ್ಡರ್, ಮೌನೇಶ ಯತ್ನಟ್ಟ, ಉಮರ್‌ಸಾಬ್, ಮಂಜಪ್ಪ ವದಗನಾಳ ಇದ್ದರು.  
ಜಿಲ್ಲೆ

ರೈಲು ನಿಲ್ದಾಣಕ್ಕೆ ಶ್ರೀ ಮೌನೇಶ್ವರ ಹೆಸರಿಡಿ

ಯಲಬುರ್ಗಾ: ತಾಲೂಕಿನ ಲಿಂಗನಬಂಡಿ ಗ್ರಾಮದ ರೈಲು ನಿಲ್ದಾಣಕ್ಕೆ ಜಗದ್ಗುರು ಶ್ರೀ ಮೌನೇಶ್ವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಜಿಲ್ಲಾ ಒಕ್ಕೂಟದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಕೊಪ್ಪಳದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಮೌನೇಶ ಬಡಿಗೇರ್ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಇರುವ ಮತ್ತು ಪವಾಡ ಪುರುಷ ಶ್ರೀ ಮೌನೇಶ್ವರ ಈ ಭಾಗದ ಆರಾಧ್ಯ ದೈವನಾಗಿದ್ದಾನೆ. ಲಕ್ಷಾಂತರ ಭಕ್ತರನ್ನು ಒಳಗೊಂಡ ಮೌನೇಶ್ವರ ದೇವಸ್ಥಾನ ಪ್ರಸಿದ್ಧಿಯಾಗಿದೆ. ಹೀಗಾಗಿ ಲಿಂಗನಬಂಡಿಯಲ್ಲಿರುವ ರೈಲು ನಿಲ್ದಾಣಕ್ಕೆ ಜಗದ್ಗುರು ಮೌನೇಶ್ವರ ಹೆಸರಿಡಬೇಕು. ಅಲ್ಲದೇ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಕೈಗಾರಿಕೆ ಕಂಪನಿ ಇದ್ದು, ಕಾರ್ಮಿಕರ ಆರೋಗ್ಯದೃಷ್ಟಿಯಿಂದ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಕೃಷ್ಣಾ ಬಡಿಗೇರ್, ರಾಜಾಬಕ್ಷಿ, ಮುತ್ತು ವಡ್ಡರ್, ಮೌನೇಶ ಯತ್ನಟ್ಟ, ಉಮರ್‌ಸಾಬ್, ಮಂಜಪ್ಪ ವದಗನಾಳ ಇತರರಿದ್ದರು.