ಯಳಂದೂರು: ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳ ಪೈಕಿ 3 ರಲ್ಲಿ ಜಯ ಗಳಿಸಿದೆ. ಆದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಅನ್ಯಾಯವಾಗಿದ್ದು ಇಲ್ಲಿನ ಜನರ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ ಎಂದು ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಶನಿವಾರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಇಲ್ಲಿನ ಅಭ್ಯರ್ಥಿಗಳಲ್ಲಿ ನಾಲ್ಕು ಬಾರಿ ಜಯ ಗಳಿಸಿರುವ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನವನ್ನು ನೀಡುವ ಭರವಸೆ ಇತ್ತು. ಆದರೆ ಇವರಿಗೆ ಉಪ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಕೊಳ್ಳೇಗಾಲದಲ್ಲಿ ಎ.ಆರ್. ಕೃಷ್ಣಮೂರ್ತಿ ಹಾಗೂ ಗುಂಡ್ಲುಪೇಟೆಯಲ್ಲಿ ಗಣೇಶ್‌ಪ್ರಸಾದ್ ಕೂಡ ಜಯ ಗಳಿಸಿದ್ದಾರೆ. ಅವರನ್ನೂ ಕಡೆಗಣಿಸಲಾಗಿದೆ ಎಂದರು.
ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಪಪಂ ಸದಸ್ಯ ವೈ.ಜಿ. ರಂಗನಾಥ, ರಿಜ್ವಾನ್, ಮಾರನಾಯಕ, ಲಿಂಗರಾಜು, ಮಲ್ಲು, ರಾಜಶೇಖರ್, ಗ್ರಾಪಂ ಸದಸ್ಯ ಸ್ವಾಮಿ, ಪುಟ್ಟ, ಕೆ. ವೆಂಕಟೇಶ್, ಎ. ವೆಂಕಟೇಶ್, ಇಬ್ರಾಹಿಂ, ಮಹದೇವಶೆಟ್ಟಿ, ಗೋವಿಂದಶೆಟ್ಟಿ, ಕುಮಾರ, ರಂಗಸ್ವಾಮಿ, ನಿಂಗರಾಜು, ರಾಜಶೇಖರ್, ಗೋವಿಂದನಾಯಕ, ಕಾಮಶೆಟ್ಟಿ ದುಗ್ಗಹಟ್ಟಿ ಕಾಮರಾಜು ಇತರರು ಇದ್ದರು.