ಯಳಂದೂರು: ತಾಲೂಕಿನ ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಶ್ರೀಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಬುಧವಾರ ಹುಂಡಿಗಳ ಹಣ ಎಣಿಕೆ ನಡೆದು ಮೂರು ತಿಂಗಳ ಅವಧಿಯಲ್ಲಿ 31,15,367ರೂ.ಸಂಗ್ರಹವಾಗಿದೆ.
ಬುಧವಾರ ಬೆಳಗ್ಗೆಯಿಂದಲೇ ದೇಗುಲದ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಬ್ಯಾಂಕ್ ನೌಕರ ವರ್ಗದವರಿಂದ ಹುಂಡಿಯ ಹಣ ಎಣಿಕೆ ಕಾರ್ಯ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ದೇಗುಲದ ಅಲಮೇಲು ಅಮ್ಮನವರ ದೇಗುಲದ ಮುಂಭಾಗದ ಆವರಣದಲ್ಲಿ ನಡೆಯಿತು.
ವಿದೇಶಿ ಕರೆಸ್ಸಿಯಾದ ಮಲೇಶಿಯಾ 1 ಡಾಲರ್, ಅಮೆರಿಕಾದ 10 ಡಾಲರ್‌ಗಳು ದೇಗುಲದ ಹುಂಡಿಯಲ್ಲಿ ಹಾಕಲಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು. ತಹಸೀಲ್ದಾರ್ ಜಯಪ್ರಕಾಶ್, ಉಪ ತಹಸೀಲ್ದಾರ್ ಮಾದೇಶ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ಪ್ರಭುಸ್ವಾಮಿ, ಪಾರುಪತ್ತೇದಾರ ರಾಜು, ಸರೋಜಾ, ಪೊಲೀಸ್ ಸಿಬ್ಬಂದಿ ಗುರುಸಿದ್ದಯ್ಯ ಮತ್ತಿತರರು ಹಾಜರಿದ್ದರು.