ಯಳಂದೂರು: ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ನಿಮಿತ್ತ ಬುಧವಾರ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ಕೆಸ್ತೂರು ಗ್ರಾಮದ ಶ್ರೀ ಶಿವಕುಮಾರಸ್ವಾಮಿ ಸಾಂಸ್ಕೃತಿಕ ಕಲಾ ಸಂಘದವರು ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗನಾಥಸ್ವಾಮಿ ಸೇರಿದಂತೆ ವಿವಿಧ ದೇವರ ಕುರಿತು ಗೀತೆಗಳನ್ನು ಹಾಡಿದರು. ಗಾಯಕರಾದ ಎಂ.ಪರಶಿವಪ್ಪ, ಶಾಂತಮೂರ್ತಿ, ಬಸವಣ್ಣಾಚಾರ್, ಕೆ.ಎಸ್.ನಾಗರಾಜು ಗಾನಸುಧೆ ಹರಿಸಿದರೆ, ಕೆ.ಎಸ್.ಪುಟ್ಟಣ್ಣ ತಬಲಾ, ರಾಜೇಶ್ ಕೀಬೋರ್ಡ್, ಕೆ.ಬಿ.ಬಸವಣ್ಣ ಘಟಂ ಮೂಲಕ ಸಾಥ್ ನೀಡಿದರು.