ಯಳಂದೂರು: ಉಪವಿಭಾಗದ ವ್ಯಾಪ್ತಿಗೆ ಬರುವ 66/11 ಕೆವಿ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ಕಾರ್ಯ ನಿರ್ವಹಣೆ ಹಿನ್ನೆಲೆಯಲ್ಲಿ ಜೂ.22 ರಂದು ವಿವಿಧೆಡೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಉಪವಿಭಾಗ ವ್ಯಾಪ್ತಿಗೆ ಬರುವ ಯಳಂದೂರು ಪಟ್ಟಣ, ಯರಿಯೂರು, ವೈ.ಕೆ.ಮೋಳೆ, ಮದ್ದೂರು, ಉಪ್ಪಿಮೋಳೆ, ಕೃಷ್ಣಾಪುರ, ಯರಗಂಬಳ್ಳಿ, ಗುಂಬಳ್ಳಿ, ದಾಸನಹುಂಡಿ, ಕೆ. ದೇವರಹಳ್ಳಿ, ಹೆಗ್ಗಡೆಹುಂಡಿ, ಚಂಗಚಹಳ್ಳಿ, ಗಣಿಗನೂರು, ಚಾಮಲಾಪುರ, ಕೊಮಾರನಪುರ, ವಡಗೆರೆ, ಗೌಡಹಳ್ಳಿ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.