ಯಳಂದೂರು: ಸಂತೇಮರಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಸಂಜೆ ಕೇರೆ ಹಾವು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕ ಮೂಡಿಸಿತು.
ವಿದ್ಯಾರ್ಥಿನಿಯರು ಶಾಲೆ ತರಗತಿ ಮುಗಿಸಿಕೊಂಡು ವಾಪಸ್ ವಸತಿ ನಿಲಯಕ್ಕೆ ಆಗಮಿಸಿ ಓದುತ್ತಿದ್ದ ಸಮಯದಲ್ಲಿ 6 ಅಡ್ಡಿ ಉದ್ದದ ಕೇರೆ ಹಾವು ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿಯರು ಸಹಾಯಕಿರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ನೇಕ್ ಸುಂದರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ವಸತಿನಿಲಯಕ್ಕೆ ಬಂದ ಸುಂದರ್ ವಸತಿ ನಿಲಯದ ಕಾಂಪೌಂಡ್ ಬಳಿ ಬಿಲದಲ್ಲಿ ಅಡಗಿದ್ದ ಹಾವನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.