ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಣೆ

ಯಳಂದೂರು: ಸಮೀಪದ ನಾಗವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯಳಂದೂರು ತಾಲೂಕು ಲಯನ್ಸ್ ಕ್ಲಬ್ ವತಿಯಿಂದ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಲಯನ್ಸ್ ಸಂಸ್ಥೆಯ ಡಿ.ಜೆ.ರಾಜೇಶ್ ಮಾತನಾಡಿ, ಯಳಂದೂರು ಲಯನ್ಸ್ ಸಂಸ್ಥೆ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಪ್ರತಿವರ್ಷ ಸಂಸ್ಥೆ ವತಿಯಿಂದ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಲಯನ್ಸ್ ಸಂಸ್ಥೆಯ ಬಸವರಾಜಪ್ಪ, ಮುಖ್ಯ ಶಿಕ್ಷಕ ಚಿನ್ನಪ್ಪ, ಶೇಷಣ್ಣ, ಕಾಂತರಾಜು ಇದ್ದರು.