ಜಿಲ್ಲೆ

ಮದ್ದೂರು ವ್ಯಾಪ್ತಿಯಲ್ಲಿ ಚಿರತೆ ಸಂಚಾರ

ಕಿರಣ್ ಮಾದರಹಳ್ಳಿ

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಹೊರ ವಲಯದಲ್ಲಿ ಚಿರತೆ ಕಾಣಿಸಿಕೊಂಡಿರುವುದಲ್ಲದೆ, ಬೀದಿ ನಾಯಿಯನ್ನು ಹಿಡಿದು ತಿಂದಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ರಾಜಮ್ಮ ರಂಗಸ್ವಾಮಿ ಅವರ ಜಮೀನಿನ ಬಳಿ ನಾಯಿಯನ್ನು ತಿಂದಿದ್ದು, ಆ ಸ್ಥಳದಲ್ಲಿ ರಕ್ತದ ಕಲೆಯಾಗಿದೆ. ಈ ಹಿಂದೆಯೂ ಇಲ್ಲೇ ಬೆಕ್ಕು ಹಾಗೂ ನಾಯಿಯನ್ನು ಹೊತ್ತೊಯ್ದು ಚಿರತೆ ತಿಂದಿತ್ತು. ಈ ಭಾಗದ ಜಮೀನುಗಳ ಸುತ್ತ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈಗ ಗದ್ದೆಗಳಲ್ಲಿ ಭತ್ತ ಬೆಳೆದಿರುವ ರೈತರು ತಮ್ಮ ಜಮೀನಿಗೆ ತೆರಳುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆಯೂ ಈ ಗ್ರಾಮದ ಸುವರ್ಣಾವತಿ ನದಿ ತೀರ ಹಾಗೂ ಕಾಲುವೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಈಗ ಬೀದಿ ನಾಯಿಯನ್ನು ಎಳೆದೊಯ್ದಿದ್ದು ಸಾರ್ವಜನಿಕರ ಆತಂಕ ಹೆಚ್ಚಲು ಕಾರಣವಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಬೋನನ್ನು ಇಟ್ಟು ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.