ಯಲಬುರ್ಗಾ: ಶಿಕ್ಷಕರು ಮಕ್ಕಳ ಬುದ್ಧಿಮಟ್ಟ ಅರಿತು ಅರ್ಥವಾಗುವ ರೀತಿ ಬೋಧನೆ ಮಾಡಬೇಕು ಎಂದು ಕ್ರೈಸ್ ಜಿಲ್ಲಾ ಸಮನ್ವಯಾಧಿಕಾರಿ ಜ್ಯೋತೀಶ್ವರ ಬೆಸ್ತರ ಹೇಳಿದರು.
ತಾಲೂಕಿನ ಹೊಸಳ್ಳಿಯ ಕಿತ್ತೂರು ರಾಣಿ ಚನ್ನಮ್ಮ (ಕೆಆರ್‌ಸಿ) ವಸತಿ ಶಾಲೆಯಲ್ಲಿ ಗುರುವಾರ ಜಿಲ್ಲಾ ವಸತಿ ಶಾಲೆಗಳ ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಜಾಯ್‌ಫುಲ್ ಇಂಗ್ಲಿಷ್ ಲನಿರ್ಂಗ್ (ಜೆಇಎಲ್) ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ಬೋಧನೆ ಮುಂಚೆ ಅಧ್ಯಯನ ಪೂರ್ವ ತಯಾರಿ ನಡೆಸಬೇಕು. ವಿದ್ಯಾರ್ಥಿಗಳ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಶಿಕ್ಷಕರಿಗಿರಬೇಕು ಎಂದರು.
ಪ್ರಾಚಾರ್ಯ ವಿ.ಬಿ.ಹನುಮಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಚನ್ನನಗೌಡ ಪಾಟೀಲ್, ಜಿಲಾನಿಸಾಬ್ ದೇಸಾಯಿ, ಶಿಕ್ಷಕರಾದ ದ್ಯಾಮಣ್ಣ ರಾಜೂರು, ಕಳಕೇಶ ಅರಕೇರಿ, ಮಂಜುಳಾ ನರೇಂದ್ರ ಇತರರಿದ್ದರು.