ಯಲಬುರ್ಗಾ: ತಾಲೂಕಿನಲ್ಲಿ ರಾಸಾಯನಿಕ ಯೂರಿಯಾ ಗೊಬ್ಬರ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ಕರವೇ (ಶಿವರಾಮೇಗೌಡ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಗುಂಗಾಡಿ ಶರಣಪ್ಪಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಜಶೇಖರ ಶ್ಯಾಗೋಟಿ ಮಾತನಾಡಿ, ತಾಲೂಕಿನಲ್ಲಿ ರೈತರು ಮುಂಗಾರಿನಲ್ಲಿ ಸುರಿದ ಮಳೆಗೆ ನಾನಾ ಬೆಳೆಗಳನ್ನು ಬಿತ್ತನೆ ಮಾಡಿದ್ದು ಈಗಾಗಲೇ ಕಟಾವಿನ ಹಂತಕ್ಕೆ ಬಂದಿದೆ. ಇನ್ನೂ ತಾಲೂಕಿನಲ್ಲಿ 7,762 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕಜೋಳ ಬಿತ್ತನೆಯಾಗಿದೆ. ಸಮರ್ಪಕ ರಸಗೊಬ್ಬರ (ಯೂರಿಯಾ) ದೊರೆಯುತ್ತಿಲ್ಲ. ರೈತರು ಸಣ್ಣ ಕಾಳಿನ ಗೊಬ್ಬರ ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಆಗ್ರಹಿಸಿದರು.
ಘಟಕದ ತಾಲೂಕು ಅಧ್ಯಕ್ಷ ಶಂಕರ ಮೂಲಿ ಮಾತನಾಡಿದರು. ಪದಾಧಿಕಾರಿಗಳಾದ ವೀರೇಂದ್ರ ಈಳಿಗೇರ್, ರಾಮನಗೌಡ ಭಾವಿಕಟ್ಟಿ, ಮೌನೇಶ ಬಡಿಗೇರ್, ಮಲ್ಲೇಶ ಕುಲಕರ್ಣಿ, ಮಲ್ಲಪ್ಪ ಲಕ್ಕಲಕಟ್ಟಿ, ದೇವರಾಜ ಎಮ್ಮಿ, ವಿರೇಶ ಕಿನ್ನಾಳ, ಶರಣಪ್ಪ ಬೊಮ್ಮನಾಳ, ಹನುಮೇಶ ಬುಡಶೆಟ್ಟನಾಳ ಇನ್ನಿತರರಿದ್ದರು.