ಯಲಬುರ್ಗಾದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಹೃದಯದಿನ ಆಚರಣೆ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ.ಶೇಖರ ಭಜಂತ್ರಿ ಚಾಲನೆ ನೀಡಿದರು. ವೈದ್ಯರಾದ ಪ್ರಸಾದ, ಸುಮಂಗಲಾ ಇದ್ದರು. 
ಜಿಲ್ಲೆ

ಆರೋಗ್ಯಪೂರ್ಣ ಆಹಾರ ಪದ್ಧತಿ ಅಳವಡಿಸಿಕೊಳ್ಳಿ

ಯಲಬುರ್ಗಾ: ಒತ್ತಡರಹಿತ ಜೀವನ, ಉತ್ತಮ ಜೀವನಶೈಲಿ ಜತೆಗೆ ಆರೋಗ್ಯಪೂರ್ಣ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಶೇಖರ ಭಜಂತ್ರಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯ ರೋಗ ದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಒತ್ತಡದ ಬದುಕಿನ ಕಾರಣ ಅನೇಕರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಿಯಮಿತ ಆಹಾರ, ಧ್ಯಾನ, ವ್ಯಾಯಾಮದಿಂದ ಅಂತಹ ಕಾಯಿಲೆ ತಡೆಗಟ್ಟಬಹುದು.

ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಸರ್ಕಾರ ಆರೋಗ್ಯ ಇಲಾಖೆ ಮೂಲಕ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಹಲವಾರು ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವೈದ್ಯರಾದ ಡಾ.ಪ್ರಸಾದ, ಡಾ.ಸುಮಂಗಲಾ ಬೇಲೇರಿ ಮಾತನಾಡಿದರು. ಡಾ.ಸಂಗನಬಸಪ್ಪ, ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ ಹಾಗೂ ಆರೋಗ್ಯ ಸಿಬ್ವಂದಿ ಇದ್ದರು.