ಯಲಬುರ್ಗಾ: ರಂಗಭೂಮಿ ಕಲೆ, ಸಾಹಿತ್ಯ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಅಯ್ಯನಗೌಡ ಕೆಂಚಮ್ಮನವರ್ ಹೇಳಿದರು.
ತಾಲೂಕಿನ ನರಸಾಪುರದಲ್ಲಿ ಮಾರುತೇಶ್ವರ ಯುವ ಕಲಾ ನಾಟ್ಯ ಸಂಘ ಶನಿವಾರ ಏರ್ಪಡಿಸಿದ್ದ ಜಗಮೆಚ್ಚಿದ ಮಗ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿ ಕಲೆಗೆ ತನ್ನದೇ ವೈಶಿಷ್ಟ್ಯವಿದ್ದು, ಕಲೆಯ ಉಳಿವು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ. ಸಾಮಾಜಿಕ ಸಾಮರಸ್ಯ, ಸೌಹಾರ್ದತೆ ಮತ್ತು ಕೌಟುಂಬಿಕ ಹಿನ್ನೆಲೆಯುಳ್ಳ ಕತೆಯಾಧಾರಿತ ಸಾಮಾಜಿಕ ನಾಟಕಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ, ವಕೀಲ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಮಕ್ಕಳ್ಳಿಯ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಸದಸ್ಯ ಬಸನಗೌಡ ಮಾಲಿಪಾಟೀಲ್, ಹನುಮಗೌಡ ಮಾಲಿಪಾಟೀಲ್, ಪ್ರಮುಖರಾದ ಹನುಮಂತಪ್ಪ ಗೊಂದಿ, ವೀರೇಶ ನಾಯಕ್, ಶಿವಪ್ಪ ಕೊಪ್ಪದ, ಶಶಿಧರ ನಾಯಕ, ಈಶಪ್ಪ ಬಡಿಗೇರ್, ಹನುಮಂತಪ್ಪ ರ‌್ಯಾವಣಕಿ, ಶ್ರೀಕಾಂತಗೌಡ ಮಾಲಿಪಾಟೀಲ್ ಇನ್ನಿತರರಿದ್ದರು.