ಯಲಬುರ್ಗಾ ತಾಲೂಕಿನ ಬೋದೂರಿನಲ್ಲಿ ಆಯೋಜಿಸಿದ್ದ ತಾಳಕೇರಿ-ಹಿರೇವಂಕಲಕುಂಟಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಜ್ಯೋತಿಯನ್ನು ಊರಿನ ಮುಖಂಡ ಷಡಕ್ಷರಯ್ಯ ಹಿರೇಮಠ ಸ್ವೀಕರಿಸಿದರು. ಗ್ರಾಪಂ ಸದಸ್ಯ ಸೋಮನಗೌಡ ಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕುರ್ನಾಳ, ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಮುಖ್ಯಶಿಕ್ಷಕ ಧರ್ಮಣ್ಣ ಬಿಂಗಿ, ಗಣ್ಯರಾದ ಹನುಮಂತಪ್ಪ ಕೊಬ್ಲರ್, ಹನುಮಂತಪ್ಪ ತಳವಾರ್ ಇದ್ದರು.  
ಜಿಲ್ಲೆ

ಕ್ರೀಡೆಯಿಂದ ಆರೋಗ್ಯ ಸುಧಾರಣೆ

ಯಲಬುರ್ಗಾ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಗುತ್ತದೆ ಎಂದು ಸ್ಥಳೀಯ ಮುಖಂಡ ಷಡಕ್ಷರಯ್ಯಸ್ವಾಮಿ ಹಿರೇಮಠ ಹೇಳಿದರು.

ತಾಲೂಕಿನ ಬೋದೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ತಾಳಕೇರಿ-ಹಿರೇವಂಕಲಕುಂಟಾ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಅನಾವರಣಕ್ಕೆ ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಬೇಕು. ಗ್ರಾಮೀಣ ಕ್ರೀಡೆ ಉಳಿವಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಸೋಲು ಗೆಲುವನ್ನು ಲೆಕ್ಕಿಸದೇ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ಆಟ ಆಡಬೇಕು ಎಂದರು.

ಸಿಆರ್‌ಪಿ ದೊಡ್ಡನಗೌಡ ಪಾಟೀಲ್ ಮಾತನಾಡಿದರು. ಗ್ರಾಪಂ ಸದಸ್ಯ ಸೋಮನಗೌಡ ಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಶಿವಶರಣಪ್ಪ ಕುರ್ನಾಳ, ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಮುಖ್ಯಶಿಕ್ಷಕ ಧರ್ಮಣ್ಣ ಬಿಂಗಿ, ಪ್ರಮುಖರಾದ ಹನುಮಂತಪ್ಪ ಕೊಬ್ಲರ್, ಹನುಮಂತಪ್ಪ ತಳವಾರ್, ಬಸವರಾಜ ಮೇಟಿ, ಮುಕುಂದ ಭಗವತಿ, ಬಸವರಾಜ ಮುಳಗುಂದ, ಮಾನಪ್ಪ ಪತ್ತಾರ, ಸಂಗಯ್ಯ ಹಿರೇಮಠ, ಸಿದ್ದಲಿಂಗಪ್ಪ ಶ್ಯಾಗೋಟಿ, ಸೋಮು ಗೌಡ್ರ, ಬಸವರಾಜ ಬೋದೂರು ಇತರರಿದ್ದರು.