ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢಶಾಲೆಯ ರಾಮನ್ ವಿಜ್ಞಾನ ಕೇಂದ್ರಕ್ಕೆ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಭೇಟಿ ನೀಡಿ, ವೀಕ್ಷಿಸಿದರು.  
ಜಿಲ್ಲೆ

ವಿಜ್ಞಾನ ಕೇಂದ್ರಕ್ಕೆ ಸೌಕರ್ಯ ಕಲ್ಪಿಸಲು ಪ್ರಯತ್ನ: ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಭರವಸೆ

ಯಲಬುರ್ಗಾ: ದಾನಿಗಳ ನೆರವಿನಿಂದ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿರುವುದು ಶ್ಲಾಘನೀಯ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಹೇಳಿದರು.

ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭಿಸಿರುವ ರಾಮನ್ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ಶಿಕ್ಷಕರು ಪಾಠದ ಜತೆಗೆ ವಿಜ್ಞಾನ ವಿಷಯವನ್ನು ಪ್ರಾಯೋಗಿಕವಾಗಿ ಬೋಧಿಸಲು ಮುಂದಾಗಿರುವುದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಅನುಕೂಲವಾಗಲಿದೆ.ಕೇಂದ್ರಕ್ಕೆ ಬೇಕಾಗುವ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಬಳಿಕ ಶಿಕ್ಷಕರಿಂದ ಅಗತ್ಯ ಉಪಕರಣಗಳ ಪಟ್ಟಿ ಪಡೆದರು.

ಮುಖ್ಯಶಿಕ್ಷಕ ಬಾಬುಸಾಬ್ ಲೈನ್‌ದಾರ್, ವಿಜ್ಞಾನ ಶಿಕ್ಷಕ ದೇವೇಂದ್ರಪ್ಪ ಜಿರ್ಲಿ, ಪ್ರಮುಖರಾದ ಅಯ್ಯನಗೌಡ ಕೆಂಚಮ್ಮನವರ್, ಮಲ್ಲಿಕಾರ್ಜುನ ಹರ್ಲಾಪುರ, ವೆಂಕಟೇಶ ವಾಲ್ಮೀಕಿ, ರಾಚಪ್ಪ ಹುರಳಿ, ಯಮನೂರಪ್ಪ ಬ್ಯಾಳಿ, ಎಸ್.ಎನ್.ಏಳುಗುಡ್ಡದ, ಗ್ರಾಪಂ ಸದಸ್ಯರಾದ ಪ್ರೇಮ್‌ಕುಮಾರ್ ಸುರಳ, ಮಂಜುನಾಥ ಬಂಗಿ ಇತರರಿದ್ದರು.