ಯಲಬುರ್ಗಾದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಭಾನುವಾರ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಪಪಂ ಸದಸ್ಯ ಕಳಕಪ್ಪ ತಳವಾರ್, ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಚಂದ್ರು ಮರದಡ್ಡಿ, ಶಿವಪ್ಪ ಹುಬ್ಬಳ್ಳಿ ಇತರರಿದ್ದರು. 
ಜಿಲ್ಲೆ

ಸರ್ವಜ್ಞ ತ್ರಿಪದಿಗಳು ಸರ್ವಕಾಲಿಕ ಶ್ರೇಷ್ಠ - ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅಭಿಮತ

ಯಲಬುರ್ಗಾ: ವಾಸ್ತವಿಕವಾದಿ ಮತ್ತು ತತ್ವಜ್ಞಾನಿಯಾಗಿದ್ದ ಕವಿ ಸರ್ವಜ್ಞನ ತ್ರಿಪದಿಗಳು ಸರ್ವ ಕಾಲಕ್ಕೂ ಶ್ರೇಷ್ಠ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹೇಳಿದರು.

ಪಟ್ಟಣದ ಒಂದನೇ ವಾರ್ಡ್‌ನ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಸರ್ವಜ್ಞನ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವಜ್ಞ ಎಂಬುದು ಸಂಸ್ಕೃತ ಪದವಾಗಿದ್ದು, ಎಲ್ಲವನ್ನು ತಿಳಿದಾತ ಎಂಬುದಾಗಿದೆ. ಅವರ ತ್ರಿಪದಿಗಳು ಮನುಕುಲಕ್ಕೆ ಮಾದರಿ ಎಂದರು.

ಪಪಂ ಸದಸ್ಯ ಕಳಕಪ್ಪ ತಳವಾರ್, ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಚಂದ್ರು ಮರದಡ್ಡಿ, ಶಿವಪ್ಪ ಹುಬ್ಬಳ್ಳಿ, ಅಂಬರೀಶ್ ಸಂಕನೂರ, ರಮೇಶ್ ಮುಧೋಳ್, ಗವಿಸಿದ್ದಯ್ಯ ಗವಿಮಠ, ಕಳಕಯ್ಯ ಪುರಾಣಿಕಮಠ, ಮಲ್ಲಪ್ಪ ಸುರಕೋಡ ಇತರರಿದ್ದರು.