ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಶ್ರಿ ಲಡ್ಡು ಮುತ್ಯಾ ಅಜ್ಜ ಭೇಟಿ ನೀಡಿ ದರ್ಶನ ಪಡೆದರು. ಪ್ರಮುಖರಾದ ಲಿಂಗರಡ್ಡೆಪ್ಪ ಸೋಂಪುರ, ಸಿ.ಮಹಾಂತೇಶ, ವಿರೂಪಾಕ್ಷಪ್ಪ ಹೂಗಾರ, ರೇವಣಸಿದ್ದಪ್ಪ ಜೋಳನ್ ಇದ್ದರು.  
ಜಿಲ್ಲೆ

ಖುಷಿಯಿಂದಿದ್ದರೆ ಬದುಕು ಸಂದರ

ಯಲಬುರ್ಗಾ: ಸಮಾಜದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಮಾತ್ರ ಬದುಕು ಸಾರ್ಥಕತೆಗೊಳ್ಳುತ್ತದೆ ಎಂದು ಬಾಗಲಕೋಟೆಯ ಶ್ರೀ ಲಡ್ಡು ಮುತ್ಯಾ ಅಜ್ಜ ಹೇಳಿದರು.

ತಾಲೂಕಿನ ಸಂಗನಹಾಲ ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರೋತ್ಸವ ನಿಮಿತ್ತ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಮಾತನಾಡಿದರು.

ಪ್ರತಿಯೊಬ್ಬರೂ ಖುಷಿಯಿಂದ ಸಾಗಿದಾಗ ಬದುಕು ಸುಂದರವಾಗುತ್ತದೆ. ಇನ್ನೊಬ್ಬರಿಗೆ ಒಳಿತು ಬಯಸಬೇಕು, ಎಷ್ಟೇ ಕಷ್ಟ ಬಂದರೂ ಧೈರ್ಯ, ಆತ್ಮವಿಶ್ವಾಸದಿಂದ ಎದುರಿಸಿ ಮುನ್ನುಗ್ಗುವ ಛಲ ರೂಢಿಸಿಕೊಳ್ಳಬೇಕು. ಎಂದಿಗೂ ಕೆಟ್ಟ ಕೆಲಸಕ್ಕೆ ಕೈಹಾಕಬಾರದು. ಮೋಸ ವಂಚನೆಯಿಂದ ದೂರ ಇರಬೇಕು. ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಚಾರ-ವಿಚಾರಗಳನ್ನು ತಿಳಿದುಕೊಂಡು ಉತ್ತಮ ಹಾದಿಯಲ್ಲಿ ನಡೆಯಬೇಕು. ಗುರು-ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಮುಖರಾದ ಸಿದ್ದಪ್ಪ ಚೋಳಿನ, ಪ್ರಭುದೇವ ಹೊಸಅಂಗಡಿ, ಲಿಂಗರಡ್ಡೆಪ್ಪ ಸೋಂಪುರ, ವಿರೂಪಾಕ್ಷಪ್ಪ ಹೂಗಾರ, ರೇವಣಸಿದ್ದಪ್ಪ ಜೋಳನ್, ಸಿ. ಮಹಾಂತೇಶ ಇತರರಿದ್ದರು.