ಯಲಬುರ್ಗಾ ತಾಲೂಕಿನ ಕಲಭಾವಿಯಲ್ಲಿ ಆಯೋಜಿಸಿದ್ದ ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ಟಗರು ಬುಲ್ಸ್ ತಂಡಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದಗೌಡ ಪಾಟೀಲ್ ಟ್ರೋಫಿ ವಿತರಿಸಿದರು. ಟೀಮ್ ಕ್ಯಾಪ್ಟನ್ ಶಿವಪುತ್ರಪ್ಪ ಹೊಸ್ಮನಿ, ಪ್ರಮುಖರಾದ ಹನುಮಂತಪ್ಪ ದೇವಲ್, ಶರಣಪ್ಪ ಮೇಟಿ, ಮರಿಸ್ವಾಮಿ, ಮೌನೇಶ, ಮಾಕರ್ಂಡೆಪ್ಪ ಮೇಟಿ, ಮಂಜು ದೇವಲ್ ಇದ್ದರು.  
ಜಿಲ್ಲೆ

ಟಗರು ಬುಲ್ಸ್ ತಂಡ ಚಾಂಪಿಯನ್

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಗ್ರಾಮೀಣ ಪ್ರದೇಶಗಳಲ್ಲಿ ಟೂರ್ನಮೆಂಟ್ ಆಯೋಜಿಸುವುದರಿಂದ ಸೌಹಾರ್ದತೆ ಬೆಳೆಯಲು ಕಾರಣವಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದಗೌಡ ಪಾಟೀಲ್ ಹೇಳಿದರು.

ತಾಲೂಕಿನ ಕಲಭಾವಿ ಗ್ರಾಮದಲ್ಲಿ ದಸರಾ ನಿಮಿತ್ತ ಭಾನುವಾರ ಆಯೋಜಿಸಿದ್ದ ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಯುವಕರು ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಲೆಕ್ಕಿಸದೆ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಟಗಾರರಿಗೆ ಪ್ರೋತ್ಸಾಹಿಸುವ ಜತೆಗೆ ಪ್ರತಿಭೆ ಗುರುತಿಸುವಂಥ ಕೆಲಸ ಆಗಬೇಕು ಎಂದರು.
ಟಗರು ಬುಲ್ಸ್ ತಂಡ ಚಾಂಪಿಯನ್, ವಿಲ್ಲೇಜ್ ಬಾಯ್ಸ ರನ್ನರ್ ಅಪ್ ಆಯಿತು. ಗ್ರಾಪಂ ಸದಸ್ಯ ದೇವಪ್ಪ ವಜ್ರ, ಎಪಿಎಂಸಿ ಮಾಜಿ ಸದಸ್ಯ ಹನುಮಂತಪ್ಪ ದೇವಲ್, ಪ್ರಮುಖರಾದ ಶರಣಪ್ಪ ಮೇಟಿ, ಶಿವಪುತ್ರಪ್ಪ ಹೊಸ್ಮನಿ, ಮರಿಸ್ವಾಮಿ, ಮೌನೇಶ, ಮಾಕರ್ಂಡೆಪ್ಪ ಮೇಟಿ, ಮಂಜು ದೇವಲ್, ಅಶೋಕ ಸಿದ್ದಾಪುರ, ಶರಣಪ್ಪ ಹೊಸಮನಿ, ಭೀಮಪ್ಪ ತಳವಾರ್, ಹನುಮೇಶ ಎಸ್.ವಜ್ರದ, ನಿರುಪಾದೆಪ್ಪ ಹುಚನೂರ, ಹನುಮೇಶ ಪತ್ತಾರ, ಹನುಮೇಶ ಈಳಿಗೇರ್, ಶಿವಮೂರ್ತಿ ಹೊಸ್ಮನಿ, ಮಂಜುನಾಥ ವಣಗೇರಿ, ಶಿವಪುತ್ರಪ್ಪ ಗದ್ದಿ, ಪ್ರಶಾಂತ ಬಡಿಗೇರ್, ಹನುಮಂತಪ್ಪ ಗದ್ದಿ, ತಿರುಪತಿ ಗುತ್ತೂರು, ಗವಿ ಹುಣಸಿಹಾಳ, ರಮೇಶ ಗುತ್ತೂರು, ಮುದಕಣ್ಣ ಬ್ಯಾಳಿ, ಬಸವರಾಜ ಹೊರಪೇಟಿ ಇತರರಿದ್ದರು.