ಯಲಬುರ್ಗಾದ ಶಾದಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕುಂಬಾರ ಸಮುದಾಯದ ಸರ್ವಜ್ಞ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕ ಶರಣಪ್ಪ ಕುಂಬಾರ, ಸಮುದಾಯದ ಪ್ರಮುಖರಾದ ಅಂದಪ್ಪ ಕುಂಬಾರ, ರಾಮಣ್ಣ ಕುಂಬಾರ, ಗವಿಸಿದ್ದಪ್ಪ ಕುಂಬಾರ, ಸುರೇಶ ಕುಂಬಾರ, ಚನ್ನಪ್ಪ ಕುಂಬಾರ, ಶರಣಪ್ಪ ಕುಂಬಾರ, ವೀರೇಶ ಇದ್ದರು.  
ಜಿಲ್ಲೆ

ಕುಂಬಾರರ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿ

ಯಲಬುರ್ಗಾ: ಕುಂಬಾರ ಸಮುದಾಯ ರಾಜ್ಯದಲ್ಲೇ ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಶಿಕ್ಷಕ ಶರಣಪ್ಪ ಕುಂಬಾರ ಹೇಳಿದರು.

ಪಟ್ಟಣದ ಶಾದಿ ಮಹಲ್‌ನಲ್ಲಿ ತಾಲೂಕು ಕುಂಬಾರ ಸಮುದಾಯ ಭಾನುವಾರ ಹಮ್ಮಿಕೊಂಡಿದ್ದ ಸರ್ವಜ್ಞ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಸಂಘಟನೆ ಬಲವರ್ಧನೆಗೆ ಒತ್ತು ಕೊಡಬೇಕು. ಕುಲ ಕಸುಬು ನಂಬಿ ಬದುಕುತ್ತಿರುವ ಕುಂಬಾರ ಸಮುದಾಯ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸಮುದಾಯ ಅಭಿವೃದ್ಧಿ ಹೊಂದದೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಹೀಗಾಗಿ ಸಮುದಾಯದವರು ಸಂಘಟನೆಗೆ ಮುಂದಾಗಬೇಕಿದೆ ಎಂದರು.

ಸಮುದಾಯದ ಪ್ರಮುಖರಾದ ಅಂದಪ್ಪ ಕುಂಬಾರ, ರಾಮಣ್ಣ ಕುಂಬಾರ, ಗವಿಸಿದ್ದಪ್ಪ ಕುಂಬಾರ, ಸುರೇಶ ಕುಂಬಾರ, ಚನ್ನಪ್ಪ ಕುಂಬಾರ, ಶರಣಪ್ಪ ಕುಂಬಾರ, ವೀರೇಶ ಕುಂಬಾರ, ಶಿವರಾಜ ಕುಂಬಾರ, ನಾಗಪ್ಪ ಕುಂಬಾರ, ಶಾಂತಪ್ಪ ಕುಂಬಾರ, ಶರಣಪ್ಪ ಎಂ.ಕುಂಬಾರ, ಶರಣಪ್ಪ ಕೆ. ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ವೀರೇಶ ಎಸ್.ಕುಂಬಾರ ಮತ್ತಿತರರಿದ್ದರು.