ಜಿಲ್ಲೆ

ಎಲ್ಲರೂ ಸತ್ಯ ಶುದ್ಧ ಕಾಯಕ ಮಾಡಲಿ

ಯಲಬುರ್ಗಾ: ಹಳ್ಳಿಗಳು ಧಾರ್ಮಿಕ ಕಡೆಗೆ ಸಾಗುವುದು ಜರೂರಿದೆ ಎಂದು ಮುಂಡರಗಿಯ ಜಗದ್ಗುರು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದ ಮಂಗಳವಾರ ಶಿವಾನಂದ ಮಠದ ಶಿವೈಕ್ಯ ಶಿವಯ್ಯ ಸ್ವಾಮೀಜಿಗಳ 10ನೇ ವರ್ಷದ ಪುಣ್ಯಸ್ಮರಣೆ, 124ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಸವಕೇಂದ್ರದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರ ಮನಸ್ಸು ತುಂಬಾ ವಿಕಲ್ಪತೆಗೆ ಹೋಗಿದೆ. ಸಮಯಕ್ಕೆ ಆದ್ಯತೆ ಕೊಡಬೇಕು. ಭಗವಂತ ನಮಗೆ ಸಮಯ ಮತ್ತು ಆರೋಗ್ಯ ಕಲ್ಪಿಸಿದ್ದಾನೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಶರಣರು ಸಮಯವೇ ಶಿವ ಎಂದಿದ್ದಾರೆ. ಇಂದಿನ ದಿನಗಳಲ್ಲಿ ಶಿವ ಎಂದರೆ ಇನ್ನೊಬ್ಬರಿಗೆ ಮೋಸ ಮಾಡದೇ ಇರುವುದು ನಿಜವಾದ ಶಿವ. ಜತ್ತಿನಲ್ಲಿ ಶಿವ ಎನ್ನುವ ಪದಕ್ಕೆ ಸ್ಪಷ್ಟೀಕರಣ ಕೊಟ್ಟವರೇ 12ನೇ ಶತಮಾನದ ಶರಣರು. ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಸತ್ಯ ಶುದ್ಧ ಕಾಯಕ ಮಾಡಿ, ಜನರಿಗೆ ದಾಸೋಹ ಮಾಡಬೇಕು ಎಂದು ಕಲಿಸಿದವರು ಬಸವಣ್ಣನವರು ಎಂದರು.

ಅಜ್ಞಾನ, ಮೂಢನಂಬಿಕೆ ತೊಲಗಬೇಕು. ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿ ಎಲ್ಲರಿಗೂ ಸಮಾನತೆ ಕಲ್ಪಿಸಿದ್ದರು. ಲಿಂಗಪೂಜೆ ಜತೆಗೆ ಕಾಯಕ ಮಾಡಬೇಕು ಎಂದರು. ಮರಕಟ್ ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಸುಳೆಕಲ್ ಬ್ರಹನ್ಮಠದ ಭುವನೇಶ್ವರ ತಾತ, ಬಾದಾಮಿ-ಬೇಲೂರು ಗುರುಬಸವೇಶ್ವರ ಮಠದ ಮಹಾಂತ ಸ್ವಾಮೀಜಿ, ಅತರ್ಗದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಕೆ.ಶರಣಪ್ಪ, ಕೊಪ್ಪಳ ಬಸವೇಶ್ವರ ಟ್ರಸ್ಟ್‌ನ ರಾಜೇಶ ಶಶಿಮಠ, ಸಿಂಧನೂರಿನ ಬಸವಕೇಂದ್ರದ ಗೌರವಾಧ್ಯಕ್ಷೆ ಗಂಗಮ್ಮ ವೀರಭದ್ರಪ್ಪ ಕುರಕುಂದಿ, ಮರಕಟ್ ಬಸವಕೇಂದ್ರದ ಗೌರವಾಧ್ಯಕ್ಷ ಹನುಮಗೌಡ ಬಳ್ಳಾರಿ, ಹರ್ಷಾನಂದ ಗುರೂಜಿ, ಗಣ್ಯರಾದ ಬಸಣ್ಣ ಗಡಗಿ, ತೇಜನಗೌಡ ಪಾಟೀಲ್, ರುದ್ರಪ್ಪ ಮರಕಟ್, ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ, ಅಶೋಕ ಹರ್ಲಾಪುರ, ಬಸವರಾಜ ಕಾಡಾಪುರ, ಗಾಳೆಪ್ಪ ಓಜನಹಳ್ಳಿ, ಶಂಕ್ರಪ್ಪ ಸಾಹುಕಾರ, ದೊಡ್ಡಪ್ಪ ಮುಸಲಾಪುರ, ದೊಡ್ಡಪ್ಪ ಗೌಡ್ರ, ಮಹೇಶ ಮೇಟಿ, ಅಮರೇಶ ಗಡಿಹಳ್ಳಿ, ನಾಗನಗೌಡ ಜಾಲಿಹಾಳ, ಪಾಲಾಕ್ಷಪ್ಪ ಹುಣಸಿಹಾಳ, ಮೌನೇಶ ಪತ್ತಾರ ಇತರರಿದ್ದರು.