?????????? 
ಜಿಲ್ಲೆ

ಮುಧೋಳ ಗ್ರಾಪಂಗೆ ಅಧ್ಯಕ್ಷರಾಗಿ ಹನುಮವ್ವ ಅವಿರೋಧ ಆಯ್ಕೆ

ಯಲಬುರ್ಗಾ: ಮುಧೋಳ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಹನುಮವ್ವ ಯಲ್ಲಪ್ಪ ವಡ್ಡರ ಶುಕ್ರವಾರ ಅವಿರೋಧ ಆಯ್ಕೆಯಾದರು. ರಾಜೀನಾಮೆಯಿಂದ ತೆರೆವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹನುಮವ್ವ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಶ್ರೀಶೈಲ ತಳವಾರ ಘೋಷಿಸಿದರು.

18 ಸದಸ್ಯರಲ್ಲಿ ಮೂವರು ಗೈರಾಗಿದ್ದರು. ಗ್ರಾಪಂ ಉಪಾಧ್ಯಕ್ಷೆ ಚಂದ್ರಬಾಯಿ ಕುದರಿ, ಸದಸ್ಯರಾದ ಬಸಪ್ಪ ಅಕ್ಕಿ, ಖಾದಿರ್‌ಬಾಷಾ ತೋಳಗಲ್, ಸುವರ್ಣ ಹರಿಜನ, ಕಳಕಪ್ಪ ಹಿರೇಹಾಳ, ಮಹಾದೇವಿ ತಳವಾರ, ಶಿವರಾಜ ಆಡಗುಡಿ, ದುರಗಪ್ಪ ವಡ್ಡರ, ಮಮತಾಜ್‌ಬಿ ಹಿರೇಮನಿ, ನೀಲವ್ವ ಖಂಡೋಜಿ, ಅನಿತಾ ಹುನಗುಂದ, ಚನ್ನಬಸಯ್ಯ ಪೂಜಾರ, ಅಶೋಕ ಭಜಂತ್ರಿ, ಗ್ರಾಮ ಲೆಕ್ಕಾಧಿಕಾರಿ ಕುಮಾರ ಪರಸಾಪುರ, ವೀರಭದ್ರಪ್ಪ ನಿಡಗುಂಡಿ ಇದ್ದರು.