ಯಲಬುರ್ಗಾದ ಸಂಸ್ಥಾನ ಹಿರೇಮಠ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಗೆ ಮಲ್ಲಿಕಾರ್ಜುನ ತೆಂಗಿನಕಾಯಿ, ಸಂಗಣ್ಣ ತೆೆಂಗಿನಕಾಯಿ, ಸಿದ್ಧರಾಮೇಶ್ವರ ವಿದ್ಯಾಪೀಠದ ಶಿಕ್ಷಕವೃಂದ ತುಲಾಭಾರ ಸೇವೆ ಮಾಡಿತು.  
ಜಿಲ್ಲೆ

ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ: ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಸ್ವಾಮೀಜಿ ಅಭಿಮತ

ಶಶಿಧರ ಎಲ್

ಯಲಬುರ್ಗಾ: ಭಕ್ತರಿಗೆ ಸೇವಾ ಸಮರ್ಪಣಾ ಮನೋಭಾವ ಇದ್ದಾಗ ಮಾತ್ರ ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂಸ್ಥಾನ ಹಿರೇಮಠ ಸಿದ್ಧರಾಮೇಶ್ವರ ಶ್ರೀಗಳ 23ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿದರು. ಭಕ್ತರು ಮಠದ ಆಧಾರ ಸ್ಥಂಭವಾದಾಗ ಮಠಗಳು ಕಲ್ಯಾಣ ಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಸಂಸ್ಥಾನ ಶ್ರೀಮಠಕ್ಕೆ ತನ್ನದೇ ಇತಿಹಾಸವಿದೆ. ಶೈಕ್ಷಣಿಕ ಕ್ಷೇತ್ರ ಹಾಗೂ ಧಾರ್ಮಿಕ ಭಕ್ತಿ ಬೆಳೆಸುವಲ್ಲಿ ಸಿದ್ಧರಾಮೇಶ್ವರ ಶ್ರೀಗಳು ಮುಂದಾಗಿದ್ದಾರೆ ಎಂದರು. ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ದಾನ, ಧರ್ಮ, ಸನ್ಮಾರ್ಗ, ಸದ್ವಿಚಾರ ಅಳವಡಿಸಿಕೊಳ್ಳಬೇಕು ಎಂದರು.

ರೋಣದ ಗುಲಗಂಜಿಮಠದ ಶ್ರೀ ಗುರುಪಾದ ಸ್ವಾಮೀಜಿ ಮಾತನಾಡಿದರು. ಸಿದ್ಧರಾಮೇಶ್ವರ ಶ್ರೀಗಳಿಗೆ ಮಲ್ಲಿಕಾರ್ಜುನ ತೆಂಗಿನಕಾಯಿ, ಸಂಗಣ್ಣ ತೆಂಗಿನಕಾಯಿ, ಸಿದ್ದರಾಮೇಶ್ವರ ವಿದ್ಯಾಪೀಠದ ಶಿಕ್ಷಕವೃಂದ ತುಲಾಭಾರ ಸೇವೆ ಮಾಡಿತು. ಮಾನಿಹಳ್ಳಿಯ ಪುರವರ್ಗಮಠದ ಮಳೆಯೋಗೀಶ್ವರ ಸ್ವಾಮೀಜಿ, ಮುಖಂಡ ಅಮರಪ್ಪ ಕಲಬುರ್ಗಿ, ಮುಖ್ಯಶಿಕ್ಷಕ ಎಸ್.ಡಿ.ಅಪ್ಪಾಜಿ ಇತರರಿದ್ದರು.