ಜಿಲ್ಲೆ

ಮಲಕಸಮುದ್ರ ಯುವತಿ ಸಿಐಎಸ್‌ಎಫ್‌ಗೆ ಆಯ್ಕೆ

ಡಿಪ್ಲೊಮಾ ಓದಿರುವ ಶಶಿಕಲಾ ಕಲ್ಲೂರು

ಯಲಬುರ್ಗಾ: ತಾಲೂಕಿನ ಮಲಕಸಮುದ್ರ ಗ್ರಾಮದ ಯುವತಿ ಶಶಿಕಲಾ ಕಲ್ಲೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಆಯ್ಕೆಯಾಗಿದ್ದಾರೆ.

ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ಮುತ್ತಪ್ಪ ಹಾಗೂ ಸುವರ್ಣಮ್ಮ ಕಲ್ಲೂರು ದಂಪತಿಯ ಮೂರನೇ ಮಗಳಾಗಿರುವ ಶಶಿಕಲಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್‌ನಲ್ಲಿ ಡಿಪ್ಲೊಮಾ ಓದಿದ್ದಾರೆ. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವಾಗ ಸಿಐಎಸ್‌ಎಫ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿನ ಅರಕ್ಕೋಣಂನಲ್ಲಿ ಜು. 1ರಂದು ತರಬೇತಿಗೆ ಹಾಜರಾಗಲಿದ್ದಾರೆ.

ಶಶಿಕಲಾ ಒಬ್ಬ ಸಹೋದರ ಅತಿಥಿ ಉಪನ್ಯಾಸಕರಾಗಿದ್ದು, ಮತ್ತೊಬ್ಬರು ಆಟೋ ಓಡಿಸುತ್ತಾರೆ. ಶಶಿಕಲಾ ಸಿಐಎಸ್‌ಎಫ್‌ಗೆ ಆಯ್ಕೆಯಾಗಿರುವುದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.