ಯಲಬುರ್ಗಾದ ಪ್ರಮುಖ ವೃತ್ತ ಹಾಗೂ ಹೊರ ವಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಸ್ವಾವಲಂಬಿ ಯುವ ತಂಡದಿಂದ ಪಪಂ ಮುಖ್ಯಾಧಿಕಾರಿ ನಾಗೇಶಗೆ ಮನವಿ ಶುಕ್ರವಾರ ಸಲ್ಲಿಸಲಾಯಿತು. ತಂಡದ ಮುಖ್ಯಸ್ಥ ಮಹೇಶ ಛಲವಾದಿ, ಪ್ರಶಾಂತ ಬಳಗೇರಿ, ಪಪಂ ಸದಸ್ಯ ಅಮರೇಶ ಹುಬ್ಬಳ್ಳಿ ಇದ್ದರು.  
ಜಿಲ್ಲೆ

ಪ್ರಮುಖ ವೃತ್ತಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಪಟ್ಟಣದ ಪ್ರಮುಖ ವೃತ್ತಗಳು ಸೇರಿದಂತೆ ಹೊರ ವಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿ ಸ್ವಾವಲಂಬಿ ಯುವ ತಂಡದಿಂದ ಪಪಂ ಮುಖ್ಯಾಧಿಕಾರಿ ನಾಗೇಶಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ತಂಡದ ಮುಖ್ಯಸ್ಥ ಮಹೇಶ ಛಲವಾದಿ ಮಾತನಾಡಿ, ಪಟ್ಟಣ ಜನಸಂದಣಿಯ ಪ್ರದೇಶವಾಗಿದೆ. ಇಲ್ಲಿಗೆ ಸ್ಥಳೀಯರಲ್ಲದೇ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಹಲವಾರು ಜನ ನಾನಾ ಕಾರ್ಯ ನಿಮಿತ್ತ ನಿತ್ಯ ಆಗಮಿಸುತ್ತಾರೆ. ಅಪಘಾತ, ಮನೆಗಳ್ಳತನದಂತಹ ಅನೇಕ ಅಹಿತಕರ ಘಟನೆಗಳು ನಡೆಯುತ್ತಿದ್ದರಿಂದ ಸುರಕ್ಷತೆ ಕೊರತೆ ಕಾಡುತ್ತಿದೆ.

ಆದ್ದರಿಂದ ಪಟ್ಟಣದ ನಾನಾ ವೃತ್ತಗಳಲ್ಲಿ ಈ ಮುಂಚೆ ಅಳವಡಿಸಲಾದ ಸಿಸಿ ಕ್ಯಾಮರಾ ದುರಸ್ತಿಗೊಳಿಸುವ ಜತೆಗೆ ಪ್ರಮುಖ ವೃತ್ತ ಮತ್ತು ಹೊರ ವಲಯದಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕು ಎಂದು ಒತ್ತಾಯಿಸಿದರು.