ಯಲಬುರ್ಗಾ ತಾಲೂಕಿನ ಮದ್ಲೂರು ಗ್ರಾಮದ ಮೆಕ್ಕೆಜೋಳ ಜಮೀನಿಗೆ ಚರಂಡಿ ನೀರು ಹರಿದು ತ್ಯಾಜ್ಯ ಸಂಗ್ರಹಗೊಂಡಿರುವುದು. 
ಜಿಲ್ಲೆ

ಚರಂಡಿ ನೀರು ನುಗ್ಗಿ ಬೆಳೆ ಹಾನಿ

ಶ್ರೀನಾಥ

ಯಲಬುರ್ಗಾ: ತಾಲೂಕಿನ ಮದ್ಲೂರು ಗ್ರಾಮದಲ್ಲಿನ ಚರಂಡಿ ಮತ್ತು ಮಳೆ ನೀರು ನುಗ್ಗಿ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ.

ಅಪೂರ್ಣಗೊಂಡ ಚರಂಡಿ ಕಾಮಗಾರಿಯಿಂದ ತ್ಯಾಜ್ಯ ನೀರು ಗ್ರಾಮದ ರೈತ ಶರಣಪ್ಪ ಸಣ್ಣಗೌಡ್ರ ಅವರ ಕೃಷಿ ಜಮೀನಿಗೆ ನುಗ್ಗಿದ ಪರಿಣಾಮ ಮೆಕ್ಕೆಜೊಳ ಬೆಳೆ ಹಾನಿಯಾಗಿದೆ ಎಂದು ರೈತ ನೋವು ತೋಡಿಕೊಂಡಿದ್ದಾರೆ.

ಮಳೆ ನೀರು ಮತ್ತು ಗ್ರಾಮದ ಚರಂಡಿ ತ್ಯಾಜ್ಯ ಸರಾಗವಾಗಿ ಸಾಗಲು ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಫಸಲು ಕೊಯ್ಲಿಗೆ ಬರುವ ಸಮಯದಲ್ಲಿ ನೀರು ನುಗ್ಗಿದ್ದರಿಂದ ತೆನೆ ಫಲವಾಗಿ ಬೆಳೆ ಹಾನಿಯಾಗುತ್ತಿದೆ.

ಶೀಘ್ರವೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಷ್ಟ ಭರಿಸಬೇಕು. ಅಪೂರ್ಣಗೊಂಡ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಜಮೀನಿಗೆ ನೀರು ನುಗ್ಗದಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.