ಜಿಲ್ಲೆ

ವಕೀಲರಲ್ಲಿರಲಿ ನಿಷ್ಠುರತೆ, ಪ್ರಾಮಾಣಿಕತೆ; ನ್ಯಾಯಾಧೀಶ ವಿಜಯ್‌ಕುಮಾರ್ ಕನ್ನೂರ ಸಲಹೆ


2022ರ ಡೈರಿ ಬಿಡುಗಡೆ ಕಾರ್ಯಕ್ರಮ

ಯಲಬುರ್ಗಾ: ವಕೀಲರು ನಿಷ್ಠುರತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ಕನ್ನೂರ ಹೇಳಿದರು.

ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ವಕೀಲರ ತಾಲೂಕು ಸಂಘ ಹಾಗೂ ಡಾ.ರಾಜೇಂದ್ರ ಪ್ರಸಾದ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ 2022ರ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ನಂಬಿ ಬಂದ ಕಕ್ಷಿದಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸಬೇಕು ಎಂದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಾಳಪ್ಪ ಭೂತೆ ಮಾತನಾಡಿ, ವಕೀಲರು ಅನುಭವಸ್ಥರಿಂದ ಜ್ಞಾನ ಪಡೆದು, ಕಕ್ಷಿದಾರರಿಗೆ ನ್ಯಾಯದಾನ ಮಾಡಬೇಕು ಎಂದರು.