ಜಿಲ್ಲೆ

ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಿರಿ

Koppal

ಮುಖ್ಯಶಿಕ್ಷಕ ಪೀರ್‌ಸಾಬ್ ನದಾಫ್ ಸಲಹೆ

ಯಲಬುರ್ಗಾ: ಪ್ರತಿಯೊಬ್ಬ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕು ಎಂದು ಮುಖ್ಯಶಿಕ್ಷಕ ಪೀರ್‌ಸಾಬ್ ನದಾಫ್ ಹೇಳಿದರು.

ತಾಲೂಕಿನ ಚಿಕ್ಕಮನ್ನಾಪುರ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಲು ಮುಂದಾಗಬೇಕು. ಇಂದಿನ ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಾಣಬೇಕು ಎಂದರು.

ಪ್ರತಿ ಶನಿವಾರ ನಡೆಸುವ ಕ್ವಿಜ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಥಮ ಸ್ಥಾನ ದ.ರಾ.ಬೇಂದ್ರೆ ತಂಡ, ದ್ವಿತೀಯ ಸ್ಥಾನವನ್ನು ಕುವೆಂಪು ತಂಡ ಗಳಿಸಿತು. ನಂತರ ಬಹುಮಾನ ವಿತರಿಸಲಾಯಿತು. ಇದೇ ವೇಳೆ 8ನೇ ತರಗತಿ ವಿದ್ಯಾರ್ಥಿನಿಯರು 7ನೇ ತರಗತಿ ವಿದ್ಯಾರ್ಥಿನಿಯರಿಗೆ ಜ್ಯೋತಿ ವರ್ಗಾವಣೆ ಮಾಡಿದರು. ಶಿಕ್ಷಕರಾದ ಎಚ್.ಕೆ.ಲತಾ, ಯಮನಪ್ಪ ಗದಾರಿ, ಹನುಮೇಶ ಪತ್ತಾರ, ಪ್ರಭಾಕರ ನಿಡಶೇಸಿ, ಲಕ್ಷ್ಮೀ ನಾರಾಯಣ ಶ್ರೇಷ್ಠಿ, ದೊಡ್ಡಬಸಮ್ಮ, ಸಿದ್ದಪ್ಪ ಗುಡಿಹಿಂದಲ್, ಪರಮೇಶ ಇತರರಿದ್ದರು.