ಲ್ಯಾಪ್‌ಟಾಪ್ ವಿತರಿಸುವಂತೆ ಒತ್ತಾಯಿಸಿ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಸ.ಪ್ರ.ದರ್ಜೆ ಕಾಲೇಜು ವಿದ್ಯಾರ್ಥಿಗಳು ಶಾಸಕ ಹಾಲಪ್ಪ ಆಚಾರ್‌ಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವಂತೆ ಒತ್ತಾಯ

ಯಲಬುರ್ಗಾ: ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವಂತೆ ಒತ್ತಾಯಿಸಿ ಹಿರೇವಂಕಲಕುಂಟಾದ ಸಪ್ರ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಶಾಸಕ ಹಾಲಪ್ಪ ಆಚಾರ್‌ಗೆ ಮನವಿ ಸಲ್ಲಿಸಲಾಯಿತು.

2019-20ನೇ ಸಾಲಿನಲ್ಲಿ ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಾಗಿದ್ದು, ಹಿರೇವಂಕಲಕುಂಟಾದ ಶ್ರೀ ಶಾಂತಾಬಾಯಿ ಅಡವಿರಾವ್ ಕುಲಕರ್ಣಿ ಸ.ಪ್ರ.ದರ್ಜೆ ಕಾಲೇಜಿಗೆ ಇಲ್ಲಿಯವರೆಗೂ ಲ್ಯಾಪ್‌ಟಾಬ್ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕೆಂದು ವಿದ್ಯಾರ್ಥಿಗಳಾದ ನವೀನ್‌ಕುಮಾರ್ ಹಿರೇಮಠ, ಈಶ್ವರ್, ಅರುಣಕುಮಾರ್ ಹಾದಿಮನಿ, ವಿನೋರಾಜ್ ಸಜ್ಜನ್, ರಾಜಾವಲಿ, ಪ್ರಭು, ಶಿವುಕುಮಾರ ಸಜ್ಜನ್ ಒತ್ತಾಯಿಸಿದರು.