ಯಲಬುರ್ಗಾ: ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಮುಡಿ ಶ್ರೀ ಕರವೀರಭದ್ರೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಗುರುವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ಅಹಂಕಾರ, ದುರ್ಗುಣ ತ್ಯಜಿಸಿ ಧರ್ಮದ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ. ಹಿರಿಯರ ಮಾರ್ಗದರ್ಶನದಿಂದ ಸಂಸ್ಕಾರ ಬೆಳೆಸಿಕೊಳ್ಳಬೇಕು. ನಿಷ್ಕಲ್ಮಶ ಮನೋಭಾವದಿಂದ ಮಾಡಿದ ಸೇವೆ ಸಾಫಲ್ಯ ಪಡೆಯುತ್ತದೆ ಎಂದರು. ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕೋಲಾಟ, ಲೆಜಿಮ್ ಪ್ರದರ್ಶನ ನಡೆಯಿತು.
ಗಜಗಿನಹಾಳದ ಪ್ರವಚನಕಾರ ವೀರೇಶ ಶಾಸಿ, ಪ್ರಮುಖರಾದ ಬಿಜಕಲ್ ತಾತನವರು, ಗುರಯ್ಯ ಹಿರೇಮಠ, ಕಲ್ಯಾಣಕುಮಾರ ಭಟಪನಹಳ್ಳಿ, ವೀರಭದ್ರಯ್ಯ ಕೆಂಬಾವಿಮಠ, ಶರಣಪ್ಪಗೌಡ ಪೊಲೀಸ್‌ಪಾಟೀಲ್, ಮುತ್ತಣ್ಣ ಗೊಂಗಡಶೆಟ್ಟಿ, ಗಂಗಪ್ಪ ಹವಳಿ, ಗೌಡಪ್ಪ ಬಲಕುಂದಿ, ಶ್ಯಾನೀದ್‌ಸಾಬ್ ಮುಲ್ಲಾ, ಉಮೇಶ ಕುಕನೂರು, ಡಾ.ಕಾಶಯ್ಯ ನಂದಿಕೋಲ, ಬಸವರಾಜ ಉಳ್ಳಾಗಡ್ಡಿ, ವೀರಣ್ಣ ನಿಂಗೋಜಿ, ಬಾಬು ನಾಯ್ಕರ, ಮಲ್ಲೇಶಗೌಡ ಪೊಲೀಸ್‌ಪಾಟೀಲ್, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ಮಂಜುನಾಥ ನಿಂಗೋಜಿ, ವೀರಣ್ಣ ಮಾನಶೆಟ್ಟಿ ಇತರರಿದ್ದರು.